ಸಾವು ಗೆದ್ದು ಬಂದ್ ಸ್ವಾತಿಕ್
ತೊಟ್ಟಿಲೋತ್ಸವ ಹಾಗೂ ಮರುನಾಮಕರಣ..! ಯಾವಾಗ ಗೊತ್ತಾ..?
ಇಂಡಿ: ಸಾವು ಗೆದ್ದು ಬಂದ್ ಸ್ವಾತಿಕ್ ತೊಟ್ಟಿಲೋತ್ಸವ ಹಾಗೂ ಮರುನಾಮಕರಣ ಏ- 27 ಸಾಯಂಕಾಲ 4.30 ಗಂಟೆಗೆ ನಡೆಯಲಿದೆ. ಇತ್ತೀಚೆಗೆ ಆಟವಾಡುತ್ತಾ ತೆರಳಿ, ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಬದುಕುಳಿದು ಪವಾಡ ಸೃಷ್ಟಿಸಿದ ಲಚ್ಯಾಣ ಗ್ರಾಮದ “ಬಾಲಕ ಸಾತ್ವಿಕ್ ಮುಜಗೊಂಡನ ತೊಟ್ಟಿಲೋತ್ಸವ ಹಾಗೂ ಮರುನಾಮಕರಣ” ಕಾರ್ಯಕ್ರಮ ನಡೆಯಲಿದೆ.
ಏ.27 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ಧಲಿಂಗ ಮಹಾರಾಜ ಕಮರಿಮಠದ ಆವರಣದಲ್ಲಿ ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜರುಗುವ ಷಟಸ್ಥಲ ಧ್ವಜಾರೋಹಣವನ್ನು ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ.
ತಾಲೂಕಿನ ಸುಕ್ಷೇತ್ರ ಲಚ್ಯಾಣ ಕ್ಷೇತ್ರದ ಅಧಿಪತಿ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರು ಪ್ರಾರಂಭಿಸಿದ ಗುರು ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇದೇ ಏ. 25 ರಿಂದ 30ರ ವರೆಗೆ ಆಯೋಜಿಸಲಾಗಿದೆ. ಏ.25 ರಂದು ಜಾನುವಾರ ಜಾತ್ರೆಗೆ ಚಾಲನೆ ನೀಡಲಾಗುವದು. ಏ.27 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ಧಲಿಂಗ ಮಹಾರಾಜ ಕಮರಿಮಠದ ಆವರಣದಲ್ಲಿ ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜರುಗುವ ಷಟಸ್ಥಲ ಧ್ವಜಾರೋಹಣವನ್ನು ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.