ರಾಯಚೂರು: ಕರ್ನಾಟಕದಲ್ಲಿಯೇ ಹಿಂದುಳಿದ ಜಿಲ್ಲೆಗಳಲ್ಲೊಂದಾದ ರಾಯಚೂರಿನ ಸಾವಿತ್ರಿ ಗ್ರೂಪ್ ರಾಜ್ಯಕ್ಕೆ ಒಳ್ಳೆಯ ಹಾಗೂ ಗುಣ ಮಟ್ಟದ ಸಿರಿಧಾನ್ಯ ಆಹಾರ ಪದಾರ್ಥಗಳನ್ನು ನೀಡುವಲ್ಲಿ ಮುಂದಿದೆ ಅಲ್ಲದೆ ಈ ಭಾಗದ ಅಭಿವೃದ್ದಿಗೆ ಗ್ರೂಪ್‌ನ ಕೊಡುಗೆ ಅಪಾರವಿದೆ ಎಂದು ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್ ಬೋಸರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಾವಿತ್ರಿ ಗ್ರೂಪ್ ಆಫ್ ಕಂಪನಿಯ ೪೫ ನೇ ವರ್ಷದ ಸಂಭ್ರಮದ ಫೇಸ್ ಬುಕ್ ಲೈ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾವಿತ್ರಿ ಗ್ರೂಪ್ ದೇಶದ ಜನರಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ನಿರಂತರ ಸೇವೆ ಮಾಡುತ್ತಿದೆ. ಸಾವಿತ್ರಿ ಗ್ರೂಪ್ ನ ನಿರಂತರ ಜನರ ಸೇವೆ, ವ್ಯಾಪಾರ- ವ್ಯವಹಾರ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಲಿ ಎಂದು ಆಶಿಸಿದರು.
ನಂತರ ನಗರಸಭೆ ಸದಸ್ಯ ಸಾಜಿದ್ ಸಮೀರ್ ಮಾತನಾಡಿ, ಸಾವಿತ್ರಿ ಗ್ರೂಪ್ ಅವರು ಗುಣ ಮಟ್ಟದ ಒಳ್ಲೆಯ ಆಹಾರ ಜನರಿಗೆ ತಲುಪಿಸಿದ್ದರಿಂದ ಈ ಮಟ್ಟಕ್ಕೆ ಬೆಳೆಯಲಾಗಿದೆ, ಮುಂದೆಯೂ ಹೆಚ್ಚೆಚ್ಚು ಗ್ರಾಹಕರಾಗಲಿ ಎಂದು ತಿಳಿಸಿದರು. ನಂತರ ಸಾವಿತ್ರಿ ಗ್ರೂಪ್ ಆಫ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮಾತನಾಡಿ, ದೇಶದ ಬೆನ್ನೆಲುಬಾದ ರೈತರ ಹೇಳ್ಗೆಗಾಗಿ ನಿರಂತರ ಶ್ರಮಿಸುತ್ತಿದ್ದೇವೆ. ರೈತರಿಂದ ದೇಶ ಸಂರಕ್ಷಣೆಯಿಂದಿದೆ ನಾವ್ಯಾರು ರೈತರನ್ನು ಮರೆಯಬಾರದು. ನಮ್ಮ ಕಂಪನಿ ಬೆಳೆಯಲು ರೈತರ ಪರಿಶ್ರಮ ಪ್ರಮೂಕ ಕಾರಣ ಎಂದರು. ಈ ಸಂದರ್ಭದಲ್ಲಿ ಸಾವಿತ್ರಿ ಗ್ರೂಪ್ ಆಫ್ ಕಂಪನಿಯ ಸಿಬ್ಬಂದಿಗಳಿದ್ದರು.