ಸರ್ವಜ್ಞರ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಇಂದಿಗೂ ದಾರಿದೀಪವಾಗಿವೆ: ಸಿದ್ದನಗೌಡ ಬಿಜ್ಜೂರ
ಮುದೂರ ಶಾಲೆಯಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ
ಮುದ್ದೇಬಿಹಾಳ: ತಾಲೂಕಿನ ಮುದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸಂತಕವಿ ಸರ್ವಜ್ಞ ಮಹರ್ಷಿಯವರ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳು ಹಾಗೂ ಶಿಕ್ಷಕರಾದ ಸಿದ್ದನಗೌಡ ಬಿಜ್ಜೂರ ಅವರು ಸರ್ವಜ್ಞರ ಜೀವನ ಮತ್ತು ಬೋಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. “ಸರ್ವಜ್ಞರ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಇಂದಿಗೂ ದಾರಿದೀಪವಾಗಿವೆ. ಅವರ ತ್ರಿಪದಿಗಳು ಜೀವನದ ಸಾರವನ್ನು ಸರಳವಾಗಿ ತಿಳಿಸಿಕೊಡುತ್ತವೆ” ಎಂದು ಅವರು ಹೇಳಿದರು.
ಸಹಶಿಕ್ಷಕರಾದ ಶ ಎಚ್.ಬಿ.ಲಮಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸರ್ವಜ್ಞರ ಚಿಂತನೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಾಲೆಯ ಮುಖ್ಯಗುರುಮಾತೆ ಶ್ರೀಮತಿ ಶಾರದಾ ಆಡಗಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಸರ್ವಜ್ಞರ ವಚನಗಳನ್ನು ಗಾಯನ ಮಾಡುವುದರ ಮೂಲಕ ಪ್ರಾರ್ಥನೆ ಸಲ್ಲಿಸಿದರು. ವೇದಿಕೆಯ ಮೇಲೆ ಶಾಲೆಯ ಈ ವೇಳೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಬಸವರಾಜ ಬ್ಯಾಲ್ಯಾಳ, ಸದಸ್ಯರಾದ ಶ್ರೀ ಶಿವಲಿಂಗ ಮುರಾಳ ಹಾಗೂ ಶಿಕ್ಷಕಿಯರಾದ ಶಿಲ್ಪಾ ಸಂಗಮ, ಸುಮಲತಾ ಕೆಂಚನಗುಡ್ಡ ಉಪಸ್ಥಿತರಿದ್ದರು.
ಶಿಕ್ಷಕ ವ್ಹಿ.ಎಮ್.ಪಾಟೀಲ ಅವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿ, ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.