ಶಿವಮೊಗ್ಗ: ಬಹುದಿನಗಳಿಂದ ಇತ್ಯರ್ಥಗೊಳ್ಳದೇ ಶಿಕ್ಷಕರ ಹಾಗೂ ಸರಕಾರಿ ನೌಕರರ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ನೇತೃತ್ವದಲ್ಲಿ ನೌಕರರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಲ್ಲೇಶ್ವರದ ಸಚಿವರ ನಿವಾಸಕ್ಕೆ ತೆರಳಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಹಾಗೂ ಭತ್ಯ ಜಾರಿಗೊಳಿಸುವುದು. ಪಿಂಚಣಿ ಮತ್ತು ಎನ್ ಪಿ ಎಸ್ ರದ್ದತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ನಂತರ ಸ್ಪಂದಿಸಿ ಮಾತಾನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ನೌಕರರ ಬೇಡಿಕೆಗೆ ಬೆಂಬಲವಿದೆ. ನಿಮ್ಮ ಬೇಡಿಕೆ ಕುರಿತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸಮಾಲೋಚಿಸಿ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆಂದು ಭರವಸೆ ನೀಡಿದರು. ನೌಕರರಿಂದ ವಿವಿಧ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳುತ್ತಿವೆ. ಇದರಿಂದ ದೇಶದಲ್ಲೇ ರಾಜ್ಯ ಮೊದಲನೆಯ ಸ್ಥಾನದಲ್ಲಿದೆ ಎಂದು ಹೇಳಿದರು.