ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಮರಗೂರಿನ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ 3 ನೇ ವಾರ್ಷಿಕ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ್ ಮಾತನಾಡಿ ಸಕ್ಕರೆ ಕಾರ್ಖಾನೆ ನಿರ್ಮಿಸುವದು ನಮ್ಮ ಪೂರ್ವಜರ ಕನಸಾಗಿತ್ತು.ಇಂಡಿ ಮತ ಕ್ಷೇತ್ರದ ಜನತೆ ನನ್ನನ್ನು ಶಾಸಕನ್ನನ್ನಾಗಿ ಆಯ್ಕೆ ಮಾಡಿದ್ದಾರೆ.40 ವರ್ಷ ಪಾಳು ಬಿದ್ದ ಸಕ್ಕರೆ ಕಾರ್ಖಾನೆಯನ್ನು ಪುನಾರಾರಂಭಿಸಿ ಸಿಂದಗಿ-ಇಂಡಿ ರೈತರ ಆಸ್ತಿಯನ್ನಾಗಿ ಮಾಡಲಾಗಿದೆ.
ಕಾರ್ಖಾನೆ ಪ್ರಾರಂಭಿಸಬೇಕಾದರೆ ಸಾಕಷ್ಟು ಕಷ್ಟ-ನಷ್ಟ ಅನುಭವಿಸಲಾಗಿದೆ.ಸಕ್ಕರೆ ಕಾರ್ಖಾನೆ ಮೇಲೆ ಈಗಾಗಲೇ 300 ಕೋಟಿ ರೂ.ಸಾಲ ಇದೆ.ಆದರೂ ರಾಜ್ಯದಲ್ಲಿ ಬ್ಯಾಂಕುಗಳಿಗೆ ಸಾಲ ಮರುಪಾವತಿಸಿದ ಏಕೈಕ ಸಕ್ಕರೆ ಕಾರ್ಖಾನೆ ಎಂದರೆ ಅದು ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಎಂದರು.