- ಸಕಾಲ ಯೋಜನೆಯ ಸಮರ್ಪಕತೆ ಬಗ್ಗೆ ಕಲಾಪದಲ್ಲಿ ಪ್ರಶ್ನೆ ಮಾಡಿದ ಶಾಸಕ:
ಇಂಡಿ : ನಾಗರಿಕರಿಗೆ ನಿಗದಿತ ಕಾಲ ಮಿತಿಯೊಳಗೆ ಸರಕಾರಿ ಸೇವೆಗಳನ್ನು ಒದಗಿಸಲು ಸಕಾಲ ಯೋಜನೆ 2012 ರಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿಗೆಯಾಗಿ ಒಂದು ದಶಕ ಕಳಿದಿದ್ದು, ಪ್ರಸ್ತುತ 100 ಇಲಾಖೆ / ಸಂಸ್ಥೆಗಳ 1181 ಸೇವೆಗಳು ಸಕಾಲದಲ್ಲಿ ಅಧಿಸೂಚಿಸಲ್ಪಟ್ಟಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು ಉತ್ತರಿಸಿದರು. ಅಧಿವೇಶನದ ಕಲಾಪದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಸಕಾಲ ಯೋಜನೆ ಸಮರ್ಪಕತೆ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಗಮನ ಸೆಳೆದರು. ಇನ್ನೂ ಸಕಾಲ ಯೋಜನೆ ಅಡಿ ದೀರ್ಘಕಾಲ ಅವಧಿ ವರೆಗೆ ವಿಲೇವಾರಿವಾಗದೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಸರಕಾರ ಕೈ ಗೊಂಡ ವಿಶೇಷ ಕ್ರಮಗಳ ಕುರಿತು ಪ್ರಶ್ನೆ ಮಾಡಿದರು.
ಈಗಾಗಲೇ 29,63,48,794 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 29,04,46,663 ಅರ್ಜಿಗಳು ವಿಲೇವಾರಿಯಾಗಿತ್ತವೆ. ಅಲ್ಲದೇ ವಿಲೇವಾರಿಯಾದ ಅರ್ಜಿಗಳ ಪ್ರಮಾಣದಲ್ಲಿ ಶೇಕಡ 94.89 ಆಗಿರುತ್ತದೆ. ಕಂದಾಯ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ ಜೊತೆಗೆ ಇತರೆ ಇಲಾಖೆಯಲ್ಲಿ ಕೆಲವು ತ್ರಾಂತ್ರಿಕ ತೊಂದರೆಯಿಂದ ವಿಲೇವಾರಿ ಮಾಡಲು ತೊಂದರೆ ಯಾಗಿರುತ್ತೆದೆ.