ಸೈಪನಸಾಬ್ ಹುಸೇನಿ ಕಾರ್ಯ ಶ್ಲಾಘನೀಯ..
ಇಂಡಿ : ತಾಲ್ಲೂಕಿನ ಬರಗುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ ೭೪ ನೇ ಗಣರಾಜ್ಯೋತ್ಸ ಅದ್ದೂರಿಯಾಗಿ
ಸಂಭ್ರಮದಿಂದ ನೆರೆವೆರಿಯಿತು.
ತದನಂತರ ವಿಧ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ದೇಶ ಭಕ್ತಿ ಗೀತೆ, ರಾಷ್ಟ್ರ ಪ್ರೇಮ ಮೆರೆಯುವ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ಗ್ರಾ.ಪ ಮಾಜಿ ಸದಸ್ಯ ಸೈಪನಸಾಬ್ ಹುಸೇನಿ ಇಂಡಿ ಅವರು, ತಂದೆಯ ಸ್ಮರಣಾರ್ಥವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೨೨, ೨೨೧ ರೂಪಾಯಿ ಟಿವಿ ಖರೀದಿಸಲು ಹಾಗೂ ಸರಕಾರಿ ಪ್ರೌಢ ಶಾಲೆಗೆ ಸುಂದರವಾದ ಧ್ವಜಾರೋಹಣ ಕಟ್ಟಲು ೨೫,೫೫೫ ರೂಪಾಯಿ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಸೈಪನಸಾಬ್ ಹೃದಯವಂತಿಕೆಯ ಕಾರ್ಯಕ್ಕೆ ಮೆಚ್ಚಿ ಎರಡು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಮದ್ದಾನಿ ಒಡೆಯರ್, ಗ್ರಾಮದ ಮುಖಂಡ ಸೋಮನಿಂಗಗೌಡ ಪಾಟೀಲ, ಎಸ್ ಡಿ ಎಮ್ ಸಿ ಅಧ್ಯಕ್ಷ ಸುದೀರ ಕ್ಷೇತ್ರಿ, ಭೀಮಣ್ಣ ಕನ್ನೊಳ್ಳಿ, ಗ್ರಾ.ಪಂ ರತುನಶಾ ಲಿಂಗಸೂರ, ಮರೆಪ್ಪ ಗಿರಣಿವಡ್ಡರ, ಸುರೇಶ್ ಯಾದವಾಡ, ಭೀಮಶ್ಯಾ ವಾಲಿಕಾರ, ಸಿದ್ದಪ್ಪ ಕ್ಷೇತ್ರಿ, ಶಿಕ್ಷಕ ಆನಂದ ವಾಲಿಕಾರ, ಮೊಸಿನ ಬಿರಾದಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಸೈಪನಸಾಬ್ ಕಾರ್ಯಕ್ಕೆ ಶ್ಲಾಘಿಸಿದರು.