ಸಂತ ಕನಕದಾಸ ಶಾಲೆಯಲ್ಲಿ ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತ್ಯೋತ್ಸ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಏನೇನಾದರೂ ಬಲ್ಲಿರಾ ಎಂಭ ಕುಲದ ಬಗ್ಗೆ ಮಾತನಾಡಿದ ದಾಸ ಶ್ರೇಷ್ಠ ಕನಕದಾಸರ ನುಡಿ ನಮಗೆಲ್ಲ ಮಾದರಿ ಎಂದು ಎಮ್ ಜಿ ಎಮ್ ಕೆ ಪ್ರಾಚಾರ್ಯರಾದ ಎಸ್ ಕೆ ಹರನಾಳ ಹೇಳಿದರು.
ಇಲ್ಲಿನ ಪಟ್ಟಣದ ಕನಕದಾಸ ಶಾಲೆಯಲ್ಲಿ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿ ಕನಕದಾಸರನ್ನು ನಾವು ಪೂಜ್ಯ ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ. ದಾಸಶ್ರೇಷ್ಠರೆಂದೇ ಕರೆಯಲಾಗುವ ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಅವರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕನಕದಾಸರ ಕೀರ್ತನೆಗಳು ಎಂದು ಕರೆಯಲ್ಪಡುವ ಅವರ ಕೀರ್ತನೆಗಳು, ಭಕ್ತಿ ಸಂಯೋಜನೆಗಳು ಸಮಾಜವನ್ನು ಪ್ರೇರೇಪಿಸುತ್ತಿವೆ ಮತ್ತು ಉನ್ನತಿಗೊಳಿಸುತ್ತಿವೆ. ಆದರೆ ಕನಕದಾಸರ ಜೀವನವನ್ನು ಬದ್ಧತೆ, ಸಾಮಾಜ ಸುಧಾರಣೆ ಮತ್ತು ಸಾಹಿತ್ಯ ಪ್ರತಿಭೆಯ ಸಾಕಾರವಾಗಿ ನೋಡಲಾಗುತ್ತದೆ ಎಂದು ಹೇಳಿದರು.
ಬಿ ಎಚ್ ಹಾಲಣ್ಣನವರ ಮಾತನಾಡಿ ಕನಕರ ಬಾಳಿನ ಈ ಬದಲಾವಣೆಯೇ ಶ್ರೀಕೃಷ್ಣನಿಗೆ ಹತ್ತಿರವಾಗಿಸಿತ್ತು.!
ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತರಾದ ಕನಕದಾಸರ ಜನ್ಮ ದಿನವನ್ನು ನಾವು ಕನಕದಾಸ ಜಯಂತಿ ಎಂದು ಆಚರಿಸುತ್ತೇವೆ ಕನಕದಾಸರ ಜೀವನದಲ್ಲಾದ ಮಹತ್ತರ ಬದಲಾವಣೆಯೇ ಶ್ರೀಕೃಷ್ಣನಿಗೆ ಅವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿತು.
ಕನಕದಾಸರನ್ನು ನಾವು ಪೂಜ್ಯ ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ. ದಾಸಶ್ರೇಷ್ಠರೆಂದೇ ಕರೆಯಲಾಗುವ ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಅವರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕನಕದಾಸರ ಕೀರ್ತನೆಗಳು ಎಂದು ಕರೆಯಲ್ಪಡುವ ಅವರ ಕೀರ್ತನೆಗಳು, ಭಕ್ತಿ ಸಂಯೋಜನೆಗಳು ಸಮಾಜವನ್ನು ಪ್ರೇರೇಪಿಸುತ್ತಿವೆ ಮತ್ತು ಉನ್ನತಿಗೊಳಿಸುತ್ತಿವೆ. ಆದರೆ ಕನಕದಾಸರ ಜೀವನವನ್ನು ಬದ್ಧತೆ, ಸಾಮಾಜ ಸುಧಾರಣೆ ಮತ್ತು ಸಾಹಿತ್ಯ ಪ್ರತಿಭೆಯ ಸಾಕಾರವಾಗಿ ನೋಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ 18 ನೇ ದಿನದಂದು ಕನಕದಾಸರ ಜಯಂತಿಯನ್ನು ಅವರ ಜೀವನ ಮತ್ತು ಅವರ ಕೊಡುಗೆಯನ್ನು ಗೌರವಿಸಲು ಆಚರಿಸಲಾಗುತ್ತದೆ. ಎಂದು ಹೇಳಿದರು
ಅದ್ಯಕ್ಷತೆ ವಹಿಸಿ ಮಾತನಾಡಿದ ಎಮ್ ಎನ್ ಮದರಿಯವರು
ಕನಕದಾಸರು 1509 ರಲ್ಲಿ ಇಂದಿನ ಕರ್ನಾಟಕದ ಶಿಗ್ಗಾಂವ್ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಜನಿಸಿದರು. ಕನಕದಾಸರು ಮೂಲತಃ ಒಂದು ಸಂಗೀತಗಾರರ ಕುಟುಂಬದಲ್ಲಿ ಜನಿಸಿದವರಾಗಿದ್ದರಿಂದ ಅವರಲ್ಲಿ ಸಂಗೀತದ ಕಲೆ ಹುಟ್ಟಿನಿಂದಲೇ ಇತ್ತು. ಅವರ ತಂದೆ ಬೀರಪ್ಪ ನಾಯಕ ಆಸ್ಥಾನ ಸಂಗೀತಗಾರರಾಗಿದ್ದರು ಮತ್ತು ಅವರ ತಾಯಿ ಬಚ್ಚಮ್ಮ ಪ್ರತಿಭಾನ್ವಿತ ಗಾಯಕಿಯಾಗಿದ್ದರು. ಕನಕದಾಸರು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದತ್ತ ಒಲವು ಹೊಂದಿದ್ದರು.ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣಗೌಡ ಬಿಜ್ಜೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅದ್ಯಕ್ಷರಾದ ಮಲಕೇದ್ರಾಯಗೌಡ ಪಾಟೀಲ, ಬಿ ಎಸ್ ಹೊಸೂರು ,ಬಿ ಎಸ್ ಶಿರೋಳ, ಬಿ ಎಸ್ ಮೇಟಿ,ಎಮ್ ಎಮ್ ಪೂಜಾರಿ, ಎಲ್ ಎಸ್ ಮೇಟಿ ,ಎನ್ ಬಿ ರೂಡಗಿ,ಬಿ ಎಚ್ ಬಾಗೇವಾಡಿ,ಎಚ್ ಟಿ ಪೂಜಾರಿ,ಶಿವಲಿಂಗಪ್ಪಣ್ಣ ಯರಝರಿ ,ಸಂಗಣ್ಣ ಮೇಲಿನಮನಿ ,ಹುಲಗಪ್ಪ ಖಿಲಾರಹಟ್ಟಿ ,ಮಲ್ಲಣ್ಣ ಕೆಸರಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಪ್ರಾರ್ಥನೆ ಎಮ್ ಆರ್ ತಡಸದ ಸ್ವಾಗತ ಎಮ್ ಎನ್ ಯರಝರಿ, ನಿರೂಪಣೆ ಎಮ್ ಸಿ ಕಬಾಡೆ, ವಂದನಾರ್ಪಣೆ ಗೋಪಾಲ ಹೂಗಾರ,ಉಪಸ್ಥಿತರಿದ್ದರು.