News Desk : ಬಡವನ ಹೃದಯದೊಳಗೆ ಬಹದ್ದೂರ್ ಮನೆಯ ಮಗಳ ಪ್ರೀತಿ ಚಿಗುರಿ, “ಸೈಕಲ್ ಸವಾರಿ” ಹತ್ತಿ ಮಿಠಾಯಿ ಮಾರುತ್ತ ಊರು-ಊರು ಸುತ್ತವ ಬಡ ಹುಡುಗ ಬಸ್ಯಾನ ಹೃದಯದಂಗಳಕ್ಕೆ ಕಾಲಿಟ್ಟ ಮುದ್ದು ಮುಖದ ಚಲುವೆ ಮಧು. ಪ್ರೀತಿ ಚಿಗುರುವ ಮೂದಲೇ ಚಿವುಟಲು ಪ್ರಯತ್ನಿಸುವ ಚಿದು ಎಂಬ ಕಳ್ಳನ ಕಿಲಾಡಿಯ ಗುಂಪೊಂದು ಕಡೆ. ಖಳನಾಯಕ ಭರಮೆಗೌಡನ ಗತ್ತು ಗಾಂಭೀರ್ಯಕ್ಕೆ ಸೂತ್ತುರುಗಳೆ ಹೆದರುವ ಸಂದರ್ಭ , ಚಿತ್ರಕಥೆಯಲ್ಲಿ suspense-thriller-love story ಹಾಗೂ ಐದು ಸುಂದರ ಹಾಡುಗಳು ಒಳಗೊಂಡ ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿ ತಯಾರಿಸಿರುವ family entertainment ಚಿತ್ರವೆ ಈ ” ಸೈಕಲ್ ಸವಾರಿ”.
ಹೌದು ಸುರೇಶ್ ಶಿವೂರ್ ರವರ ನಿರ್ಮಾಣದಲ್ಲಿ ನಟ ನಿರ್ದೇಶನ ಸಾಹಿತ್ಯ ದೇವು ಕೆ ಅಂಬಿಗ ಛಾಯಾಗ್ರಹಣ ರೋಹನ ದೇಸಾಯಿ ಹಾಗೂ ಚಿತ್ರತಂಡ ಪೂರ್ತಿ ಚಿತ್ರೀಕರಣ ಮುಗಿಸಿ ಕೊನೆಯ ಭಾಗದ ಜಾತ್ರೆಯ ಚಿತ್ರೀಕರಣವನ್ನು ಶಾಹಾಪೂರ ತಾಲೂಕಿನ ಸಿಂಗನಹಳ್ಳಿ ಹಾಗೂ ಹುಲ್ಕಲ್ ಹಾಗೂ ಮುಡಗೂಳ ಗ್ರಾಮ ಮತ್ತು ಜಾತ್ರೆಯಲ್ಲಿನ “ಓಕಳಿಕಂಭ” ಹತ್ತುವ ಧೃಶ್ಯ ಹಾಗೂ ಹಾಡುಗಳ ಚಿತ್ರೀಕಣವನ್ನು ಮುಗಿಸಲಾಯಿತು. ಸಿಂಗನಹಳ್ಳಿ ಗ್ರಾಮದ ಉತ್ಸಾಹಿ ನಾಯಕ ಅಯ್ಯನಗೌಡರ ಸಹಾಯಹಸ್ತದಲ್ಲಿ ನೆರವೇರಿದ ಚಿತ್ರ ತಂಡವೂ ಇಂಡಿ ತಾಲೂಕಿನ ಹಡಲಸಂಗ ಮತ್ತು ಹಂಜಗಿ ಗ್ರಾಮದ A.r.biradar ಗೌಡರ ತೊಟದಲ್ಲಿ ಕಬ್ಬಿನ ಗಾಣದ ಚಿತ್ರಿಕರಣ ಮಾಡಿದರು.
ನಾಯಕ ದೇವು ಕೆ, ನಾಯಕಿ ದಿಕ್ಷಾ, ಪ್ರಮುಖ ಪಾತ್ರದಲ್ಲಿ ಕಾಣಲಿದ್ದಾರೆ. ಶಿವಾಜಿ ಮೆಟೆಗಾರ, ಮೊಹನ ಕುಮಾರ, ಲೋಕೆಶ, ವಿನೋದ ರಾಠೊಡ, ಕಾಮಿಡಿ ಖ್ಯಾತಿಯ ದೇವೂ ಸಾತಲಗಾಂವ, ಪ್ರಭು ಜಾಧವ, ರಾಮಚಂದ್ರಹಂಜಗಿ, ಅಶೊಕ ಭಜಂತ್ರಿ, ನಾಗರಾಜ ದೊಡಮನಿ, ಆನಂದ ಕಾಂಬಳೆ, ಮಾಂತು ದಳವಾಯಿ ಸೇರಿದಂತೆ ಗಿತಾ, ಜಾನವಿ, ಸಚಿನ, ಹಬಿಬ ಖಾನ, ನ್ಯಾಸಾ, ಕಾವ್ಯಾ, ಸೆರಿದಂತೆ ಅನೇಕ ಕಲಾವಿದರು ಭಾಗವಹಿಸಿದರು.