ವಿಜಯಪುರ : ಭೀಮಾತೀರದ ಮಹಾದೇವ ಸಾಹುಕಾರ್ ಬೈರಗೊಂಡ ಪೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೋರ್ಟ್ ಗೆ ಶರಣಾಗಿದ್ದ ಭೀಮಾತೀರದ ಕುಖ್ಯಾತ ಹಂತಕನ ಪತ್ನಿ ವಿಮಲಾಬಾಯಿ ಚಡಚಣ ಇವಳನ್ನು ಮಹಾದೇವ ಸಾಹುಕಾರ್ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ್ದ ಜಿಲ್ಲೆಯ ಚಡಚಣ ತಾಲ್ಲೂಕಿನ ಕೊಂಕಣಗಾಂವಕ್ಕೆ ಕರೆ ತಂದು ವಿಚಾರಣೆ ನಡೆಸಿದರು.ಕಳೆದ ಎರಡು ವರ್ಷಗಳ ಹಿಂದೆ 2020 ನವೆಂಬರ್ 2 ರಂದು ಮಹಾದೇವ ಬೈರಗೊಂಡ ಮೇಲೆ ಅಟ್ಯಾಕ್ ನಡೆದಿತ್ತು. ಮಹಾದೇವ ಬೈರಗೊಂಡ ಮೇಲೆ ನಡೆದ ಅಟ್ಯಾಕ್‌ನಲ್ಲಿ ಎ2 ಆರೋಪಿ ಯಾಗಿದ್ದ ವಿಮಲಾಬಾಯಿ, ಅಂದಿನಿಂದ ಭೂಗತಳಾಗಿದ್ದ ವಿಮಲಾಬಾಯಿ ನಾಲ್ಕು ದಿನಗಳ ಹಿಂದೆ ಕೊರ್ಟ್ ಗೆ ಶರಣಾಗಿದ್ದಳು.
ಮಹಾದೇವ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಚಡಚಣ ತಾಲ್ಲೂಕಿನ ಕೊಂಕಣಗಾಂವಗೆ ಪರಿಶೀಲನೆ ಗೆ ಕರೆದೊಯ್ದು ಸ್ಥಳ ಮೊಹಜರ್ ನಡೆಸಿದರು. ಕೊಂಕಣಗಾಂವ ನಲ್ಲಿಯೇ ಮಹಾದೇವ ಸಾಹುಕಾರ್ ಹತ್ಯೆಗೆ ಸಂಚು ರೂಪಿಸಿದ್ದರ ಕುರಿತು ಸ್ಥಳ ಪರಿಶೀಲನೆ ನಡೆಸಲಾಯಿತು.ಎಸ್ಪಿ ಆನಂದಕುಮಾರ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಬಿಗಿ ಭದ್ರತೆಯಲ್ಲಿ ಕರೆತಂದು ವಿಚಾರಣೆ ನಡೆಸಲಾಯಿತು.