ಮುದ್ದೇಬಿಹಾಳ: ವಿಜಯಪುರ ವಿಭಾಗದ ಕೆಎಸ್ಆರ್ಟಿಸಿ ನೌಕರರ ಪತ್ತಿನ ಸಹಕಾರಿ ಸಂಘ ನಿಯಮಿತದ 2026ರ ಸಾಲಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ನೂತನವಾಗಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಮುದ್ದೇಬಿಹಾಳ ಘಟಕದ ನಿರ್ವಾಹಕ ಸಾಹೇಬಪಟೇಲ ಅ. ಬಿರಾದಾರ (ಬಾವೂರ) ಅವರಿಗೆ ಇತ್ತೀಚೆಗೆ ಪಟ್ಟಣದ ದಿ!! ಮಾತೋಶ್ರೀ ನಾಗಮ್ಮ ಭೀ. ಬೆಳಗಲ್ಲ ಫೌಂಡೇಶನ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನೌಕರರ ಹಿತಕ್ಕಾಗಿ ಶ್ರಮಿಸುವ ಸಂಘದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿರಾದಾರ ಅವರನ್ನು ಫೌಂಡೇಶನ್ನ ಅಧ್ಯಕ್ಷರಾದ ಹಣಮಂತ ಭೀ. ಬೆಳಗಲ್ಲ ಹಾಗೂ ಸಾರಿಗೆ ಸಂಸ್ಥೆಯ ಸಹೋದ್ಯೋಗಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಂಘದ ಅಭಿವೃದ್ಧಿ ಹಾಗೂ ನೌಕರರ ಏಳಿಗೆಗೆ ನೂತನ ನಿರ್ದೇಶಕರು ಹೆಚ್ಚಿನ ಶಕ್ತಿ ತುಂಬಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಂಟ್ರೋಲರ್ಗಳಾದ ನಾಗಪ್ಪ ಬಾಚಿಹಾಳ, ವಿಠ್ಠಲ ಆರ್. ಲಮಾಣಿ, ಮತ್ತು ಚಾಲಕ ನಿರ್ವಾಹಕರಾದ ಬಸ್ಸು ಕರಿಬಾವಿ, ಎಸ್. ಬಿ. ತೊಗರಿ, ವಿ. ವಿ. ಕುಲಕರ್ಣಿ, ಎಸ್. ಎಸ್. ಚಲವಾದಿ, ಆರ್. ಜಿ. ಮಾದಾಪುರ, ಆರ್. ಎಸ್. ಮಾದರ, ಆರ್. ಎಸ್. ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.