ಗ್ರಾಮೀಣ ಪ್ರತಿಭೆಗಳಿಗೆ ಆಸರೆಯಾದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆ – ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಘೋಷಣೆ
ಮುದ್ದೇಬಿಹಾಳ: ಹಳ್ಳಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ರೈತಾಪಿ ಕುಟುಂಬದ ಎಂ.ಎಸ್.ಕೊಪ್ಪ ಅವರು ಆರಂಭಿಸಿರುವ ಶಿಕ್ಷಣ ಸಂಸ್ಥೆಯು ಬಡವರ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲ್ಲೂಕಿನ ಎಸ್.ಎನ್.ಡಿ. ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುದ್ದೇಬಿಹಾಳ ತಾಲ್ಲೂಕು ಇಂದು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಬಿಎಎಸ್ ಶಾಲೆ, ಅಂಜುಮನ್ ಸಂಸ್ಥೆ, ಅಹಿಲ್ಯಾದೇವಿ ಸಂಸ್ಥೆ ಹಾಗೂ ನಾಗರಬೆಟ್ಟದಂತಹ ಸಂಸ್ಥೆಗಳು ಕ್ರಾಂತಿ ಮಾಡಿವೆ. ಇದೇ ಹಾದಿಯಲ್ಲಿ ಸಾಗಿರುವ ಎಸ್.ಎನ್.ಡಿ. ಪಬ್ಲಿಕ್ ಶಾಲೆಯ ಎಸ್.ಎಸ್.ಎಲ್.ಸಿ. ಪ್ರಥಮ ಬ್ಯಾಚ್‌ನಲ್ಲಿ ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ ಅಸ್ಕಿ ಫೌಂಡೇಶನ್ ವತಿಯಿಂದ 25 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಅವರು ಇದೇ ವೇಳೆ ಘೋಷಿಸಿದರು. ಪ್ರತಿಭೆಗಳಿಗೆ ಸಮಾಜದ ಸಾಥ್ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ ಮಾತನಾಡಿ, “ಕಷ್ಟದ ಜೀವನ ಸವೆಸಿ ಧೈರ್ಯದಿಂದ ಮುನ್ನಡೆದರೆ ಮಾತ್ರ ಇಂತಹ ಶಿಕ್ಷಣ ಸಂಸ್ಥೆ ಕಟ್ಟಲು ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಬೆಳೆಯಬೇಕು” ಎಂದರು. ದ್ವಿತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗೆ 11 ಸಾವಿರ ರೂ. ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದರು. ಅಲ್ಲದೆ, ವೇದಿಕೆಯಲ್ಲಿದ್ದ ಗಣ್ಯರಾದ ಕರಿಯಪ್ಪ ಆಸಂಗಿ, ನಾನಪ್ಪ ಲಮಾಣಿ ಮತ್ತು ಬಸವರಾಜ ಸಂಕನಾಳ ಅವರು 3ನೇ, 4ನೇ ಹಾಗೂ 5ನೇ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ವಾಗ್ದಾನ ಮಾಡಿದರು. ಶ್ರಮಜೀವಿಯ ಶಿಕ್ಷಣದ ಕನಸು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಹಳೆಯ ದಿನಗಳನ್ನು ಸ್ಮರಿಸಿದರು. “ನಾನು ಗೌಂಡಿ ಕೆಲಸ, ಕೃಷಿ ಕೆಲಸ ಹಾಗೂ ಬೇರೆಯವರ ಬಳಿ ಆಳಾಗಿ ದುಡಿದಿದ್ದೇನೆ. ಬಡವರ ಮಕ್ಕಳು ಶಿಕ್ಷಣಕ್ಕಾಗಿ ಕಷ್ಟಪಡಬಾರದು ಎಂಬ ಏಕೈಕ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇನೆ. ಇದಕ್ಕೆ ಜಮಖಂಡಿ ಓಲೇಮಠದ ದಿ. ಚನ್ನಬಸವ ಸ್ವಾಮೀಜಿಯವರ ಆಶೀರ್ವಾದವೇ ಕಾರಣ” ಎಂದು ಭಾವುಕರಾದರು. ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಎಂ.ಎಸ್.ಕೊಪ್ಪ ಅವರ ಪರಿಶ್ರಮಕ್ಕೆ ಮಠವು ಸದಾ ಬೆನ್ನೆಲುಬಾಗಿ ಇರಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ, ನಾನು ಗೌಂಡಿ ಕೈಯ್ಯಲ್ಲಿ ಗಾರೆ ಕೆಲಸವನ್ನು ಮಾಡಿದ್ದೇನೆ.ಹೊಲದಲ್ಲಿ ಕೃಷಿ ಕೆಲಸವನ್ನು ಮಾಡಿದ್ದೇನೆ.ಮತ್ತೊಬ್ಬರ ಬಳಿ ಆಳಾಗಿಯೂ ಕೆಲಸ ಮಾಡಿದ್ದೇನೆ.ಆದರೆ ನನ್ನ ಕನಸು ಬಡವರ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕಾದರೆ ಕಷ್ಟಪಡಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇನೆ.ಜಮಖಂಡಿ ಓಲೇಮಠದ ದಿ.ಚನ್ನಬಸವ ಸ್ವಾಮೀಜಿಯವರ ಆಶೀರ್ವಾದ ಸಂಸ್ಥೆಯ ಮೇಲಿದೆ ಎಂದರು. ಕಾಳಗಿಯ ದೇವಿ ಆರಾಧಕ ಮಹಾದೇವಪ್ಪ ವಿಶ್ವಕರ್ಮ, ವಿಶ್ವಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರೇಶ ಗುರುಮಠ, ಶಾಲೆಯ ಮುಖ್ಯಗುರುಮಾತೆ ರೇಖಾ ಎಂ.ಎಸ್,ಈರಣ್ಣ ಬಡಿಗೇರ ಸಾನಿಧ್ಯ ವಹಿಸುವರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎ.ಲೋನಾರಮಠ,ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ,ಪ್ರಮುಖರಾದ ಯಮನಪ್ಪ ಪೂಜಾರಿ,ಮಹದೇವಪ್ಪ ಹಳ್ಳದ,ರಾಮನಗೌಡ ಬಿರಾದಾರ,ಚಂದ್ರಶೇಖರ ಕುಂಬಾರ,ನಿಂಗಪ್ಪ ಓಲೇಕಾರ,ಸುಭಾಷ ಕಟ್ಟೀಮನಿ,ಹಣಮಂತ್ರಾಯ ಮಾದಿನಾಳ,ಮಲ್ಲಯ್ಯ ಹಿರೇಮಠ ಮೊದಲಾದವರು ಇದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಅತೀ ಹೆಚ್ಚಿನ ಅಂಕ ಪಡೆದುಕೊಳ್ಳುವ ತೃತೀಯ,ನಾಲ್ಕನೇ,ಐದನೇ ಬಹುಮಾನಗಳನ್ನು ವೇದಿಕೆಯಲ್ಲಿದ್ದ ಕರಿಯಪ್ಪ ಆಸಂಗಿÀ, ನಾನಪ್ಪ ಲಮಾಣಿ, ಬಸವರಾಜ ಸಂಕನಾಳ ನೀಡುವುದಾಗಿ ವಾಗ್ದಾನ ಮಾಡಿದರು. ಎಚ್.ಆರ್.ಬಾಗಲಕೋಟ ಸ್ವಾಗತಿಸಿದರು.ನಂದಿನಿ ಪವಾರ ವರದಿ ವಾಚಿಸಿದರು. ಅಶೋಕ ಗುಂಡಿನಮನಿ ನಿರೂಪಿಸಿದರು.


















