ಗ್ರಾಮೀಣ ಪತ್ರಕರ್ತರು ಆಳವಾದ ಅಧ್ಯಯನದ ಜೊತೆಯಲ್ಲಿ ಕ್ರಿಯಾಶೀಲರಾಗಿರಬೇಕು: ಡಾ ದತ್ತೇಶ್ ಕುಮಾರ್
ಹನೂರು : ಗ್ರಾಮೀಣ ಭಾಗದಿಂದ ಬಂದಂತಹ ಪತ್ರಕರ್ತರು ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯದೆ ತಮ್ಮ ಸ್ವಂತ ಶ್ರಮದಲ್ಲಿ ಸಾಮಾಜಿಕ ಕಾರ್ಯಮಾಡುತ್ತಿರುವುದು ಬಹಳ ಸಂತೋಷದ ಸಂಗತಿ, ಆದರೆ ಅವರ ಕುಟುಂಬ ನಿರ್ವಹಣೆ ಕೆಲವರಲ್ಲಿ ಸಾಕಷ್ಟು ಚಿಂತಜನಕವಾಗಿದೆ ತಮಗೆ ನೋವಿದ್ದರು ಯಾರಿಗೂ ತೋರ್ಪಡಿಸದೆ ಸಮಾಜದ ಸುದ್ದಿ ಮಾಡುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಮಾನಸ ಕಾಲೇಜಿನ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ತಿಳಿಸಿದರು.
ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮಾಜಿ ಶಾಸಕಿ ಪರಿಮಳ ನಾಗಪ್ಪ ನವರು ಮಾತನಾಡಿ ನಮಲ್ಲಿ ಹೆಚ್ಚು ಪತ್ರಕರ್ತರು ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೆ ನೀವು ಬರೆಯುವ ಪ್ರತಿಯೊಂದು ಸುದ್ದಿಯು ಸಮಾಜಕ್ಕೆ ಮಾದರಿಯಾಗಬೇಕು. ಯುವಕರು ಹೆಚ್ಚು ಪತ್ರಕರ್ತರಾಗಿದ್ದಿರ ಮುಂದಿನ ದಿನಗಳಲ್ಲಿ ಎಲ್ಲಾರಿಗೂ ಶುಭವಾಗಲಿ ಎಂದರು .
ಉದ್ಯಮಿ ರಂಗಸ್ವಾಮಿ ಮಾತನಾಡಿ
ನಿಮ್ಮ ಸಂಘದಿಂದ ಶಾಲಾ ಮಕ್ಕಳಿಗೆ ದಾನಿಗಳಿಂದ ಸಹಾಯ ಪಡೆದು ನೋಟ್ ಬುಕ್ ಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾದುದ್ದು , ನಿಮ್ಮ ಕಾರ್ಯ ನಿರಂತರವಾಗಿ ನೆಡಯಲಿ ಪತ್ರಕರ್ತರಾದವರು ತಮ್ಮ ಬರವಣಿಗೆ ಅನ್ಯಾಯದ ವಿರುದ್ದ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜಿಡ್ಡುತನದ ವಿರುದ್ದವಾಗಿರಬೇಕು ,ಒಬ್ಬ ಪತ್ರಕರ್ತರು ಸತತವಾಗಿ ಹೋರಾಟ ಮಾಡಿದರೆ ಸರ್ಕಾರವೇ ಪತನವಾಗುತ್ತದೆ ಇನ್ನು ಸಮಸ್ಯೆಗಳು ಯಾವ ಲೆಕ್ಕ ಪ್ರಾಮಾಣಿಕ ಪತ್ರಕರ್ತರ ಜೊತೆಯಲ್ಲಿ ಸದಾಕಾಲವೂ ನಾವಿರುತ್ತೆವೆ ಎಂದು ಪತ್ರಕರ್ತರಿಗೆ ಅಭಯ ನೀಡಿದರು .
ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕ ದ ಅಧ್ಯಕ್ಷರಾದ ಬಂಗಾರಪ್ಪ ಸಿ ರವರು ನಮ್ಮ ಸಂಘವನ್ನು ಆಕಸ್ಮಿಕವಾಗಿ ಪ್ರಾರಂಭಸಿದ್ದೆವು . ಪ್ರಾರಂಭದಿಂದಲೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಹುರಿದುಂಬಿಸಿ ಪ್ರೋತ್ಸಾಹ ನೀಡುತ್ತಿರುವ ಶಾಸಕರಾದಿಯಾಗಿ ಎಲ್ಲಾರಿಗೂ ನಮ್ಮ ಸಂಘವು ಆಭಾರಿಯಾಗಿದ್ದೇವೆ. ಒಳ್ಳೆಯ ಕಾರ್ಯದ ಹಿಂದೆ ಕೆಟ್ಟದಿರುತ್ತದೆ ಹಾಗೆಯೆ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಗಳು ಸಮಾಜ ಒಳಿತಿಗಾಗಿ ನಿಂತಿರುವಾಗ ಅವರ ಕಾರ್ಯವನ್ನು ಗುರುತಿಸುವ ಕಾರ್ಯವಾಗಬೇಕು . ನಮ್ಮಲ್ಲಿರುವ ಪತ್ರಕರ್ತರು ವೃತ್ತಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸ್ವಂತ ಕೆಲಸ ಮಾಡುತ್ತಿದ್ದು ಪತ್ರಿಕ ವೃತ್ತಿಯನ್ನು ಪ್ರವೃತ್ತಿಯನ್ನಾಗಿ ಮಾಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಸ್ಥಳೀಯ ಪತ್ರಿಕೆ, ಪ್ರಾದೇಶಿಕ ಪತ್ರಿಕೆ ,ರಾಜ್ಯ ಪತ್ರಿಕೆಗಳು ಅದರಲ್ಲಿ ನಾವು ಪ್ರಕಟಿಸುವ ಸುದ್ದಿಗಳು ಪ್ರಕಟವಾಗುತ್ತದೆ. ನಮ್ಮ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಗಣ್ಯರಿಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು .
ಮುಖ್ಯ ಅತಿಥಿಗಳಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಜಾಮಿಟ್ರಿ ಬಾಕ್ಸ್ ,ಪೆನ್, ಪೆನ್ಸಿಲನ್ನು ಮುಖ್ಯ ಅತಿಥಿಗಳು ಶಾಲಾ ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರಿಗೆ ಸನ್ಮಾನ ಮಾಡಲಾಯಿತು. ಸಾಧಕರುಗಳಾದ ಪ್ರಜಾ ಪಿತಾ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಬಿಂದು ಅಕ್ಕನವರು , ಮುಖ್ಯ ಮಂತ್ರಿ ಪ್ರಶಸ್ತಿ ಪುರಸ್ಕೃತರು ಗಳಾದಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಅನಂತರಾಮು ಜಿ ,ಮತ್ತು ಪ್ರಸಾದ್ ಕೆ .ರವರು ,ಹಿರಿಯ ಪೌರ ಕಾರ್ಮಿಕರಾದ ಶ್ರೀಮತಿ ರಾಮಿ , ಯುವ ರೈತ ಮುಖಂಡರಾದ ಗಂಗನದೊಡ್ಡಿ ಲೋಕೇಶ್ ,2023-2024ನೇ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ತಾಲ್ಲೂಕು ಮಟ್ಟದಲ್ಲಿ ಗರಿಷ್ಟ ಅಂಕ ಗಳಿಸಿದ ಕ್ರಿಸ್ತರಾಜ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿ ಕು ಸೃಜನ ಜೆ. ಸ್ವಾಮಿ. ರವರಿಗೆ ಅತಿಥಿಗಳು ಸನ್ಮಾನವನ್ನು ಮಾಡಲಾಯಿತು. ಕು ಸೃಜನ ರವರಿಗೆ ಉದ್ಯಮಿ ಜಿ ನಾಗೇಶ್ ರವರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಸಾಧಕರಿಗೆ ಸಂಘದ ವತಿಯಿಂದ ಸನ್ಮಾನಗಳನ್ನು ಮಾಡಲಾಯಿತು .
ಈ ಸಂದರ್ಭದಲ್ಲಿ ಶ್ರೀ ಸಾಲೂರು ಮಠದ ಕಿರಿಯ ಶ್ರೀ ಗಳಾದ ಆಲಂಬಾಡಿ ಮಠದ ವೀರಪ್ಪ ಸ್ವಾಮೀಜಿಗಳು ಆಶೀರ್ವಚನ ನೀಡಿದರು .
ಈ ಸಮಯದಲ್ಲಿ ಡಾಕ್ಟರ್ ಪ್ರಕಾಶ್, ರೈತ ಮುಖಂಡರುಗಳಾದ ಅಮ್ಜಾದ್ ಖಾನ್ ,ಚಂಗಡಿ ಕರಿಯಪ್ಪ ,ಎಂ ಹರೀಶ್ , ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷರಾದ ನಾಗೇಂದ್ರ, ಪಟ್ಟಣ ಪಂಚಾಯತಿ ಸದಸ್ಯ ಆನಂದ್ ಕುಮಾರ್ ,ಹರೀಶ್ ಕುಮಾರ್ ,ಪವಿತ್ರ , ಮಮ್ತಾಜ್ ಬಾನು, ಉದ್ಯಮಿ ನಾಗೇಶ್ , ವೆಂಕಟೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ : ಚೇತನ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ