VOJ ನ್ಯೂಸ್ ಡೆಸ್ಕ್: ಪ್ರೇಯಸಿಗೆ ಪದೇ ಪದೇ ಫೋನ್ ಮಾಡಿ ಹಿಂಸಿಸುತ್ತಿದ್ದವನ ಕೊಲೆಗೆ ಸಂಚು ರೂಪಿಸಿದ್ದ ರೌಡಿಶೀಟರ್ ಹಾಗೂ ಆತನ ಗ್ಯಾಂಗ್ ನ್ನು ಪೊಲೀಸರು ಬಂಧಿಸಿರು ಘಟನೆ ನಡೆದಿದೆ.
ಬೆಂಗಳೂರಿನ ರಾಜಾಜಿ ನಗರದ ಮಾಜಿ ರೌಡಿಶೀಟರ್ ಅರುಣ್ ಕುಮಾರ್ ಅಲಿಯಾಸ್ ನಾಯ್ಡು, ಯಶವಂತ್, ಕಾರ್ತಿಕ್, ವಿಶಾಲ್, ಸಂಜಯ್ ಬಂಧಿತರು. ಮಂಜುಶ್ರೀ ಎಂಬ ಮಹಿಳೆ ಅರುಣ್ ಜೊತೆಗೆ ಲಿವ್- ಇನ್- ರಿಲೆಷನ್‍ಶಿಪ್‍ನಲ್ಲಿದ್ದ. ಮಂಜುಶ್ರೀಗೆ ಜೊತೆ ಈ ಹಿಂದೆ ಲಿವ್- ಇನ್- ರಿಲೆಷನ್‍ಶಿಪ್‍ನಲ್ಲಿದ್ದ ಶ್ರೀಕಾಂತ್ ಎಂಬಾತ ಪದೇ ಪದೇ ಕರೆ ಮಾಡುತ್ತಿದ್ದನಂತೆ.
ಅರುಣ್ ಜೊತೆ ಇದ್ದಾಗಲೂ ತಡರಾತ್ರಿ ಕರೆ ಮಾಡುತ್ತಿದ್ದನಂತೆ. ಇದರಿಂದ ಕುಪಿತಗೊಂಡಿದ್ದ ಅರುಣ್, ಆರ್. ಆರ್. ನಗರ ರೌಡಿಶೀಟರ್ ಕಾರ್ತಿಕ್ ಎಂಬಾತನ ಜೊತೆ ಸೇರಿ ಶ್ರೀಕಾಂತ್ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಶ್ರೀಕಾಂತ್ನನ್ನು ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್ ಬಳಿ ಕರೆದುಕೊಂಡು ಹೋಗಿದ್ದರು.
ನಂತರ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದು, ಶ್ರೀಕಾಂತ್ ಸಾವಿನಿಂದ ಪಾರಾಗಿದ್ದ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸಿಸಿಬಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಕೈಗೊಂಡಿದ್ದರು. ಅರುಣ್ ಮೊದಲ ಹಂತದ ವಿಚಾರಣೆ ವೇಳೆ ಶ್ರೀಕಾಂತ್ ತನ್ನ ಪತ್ನಿಗೆ ಕರೆ ಮಾಡಿ ಹಿಂಸೆ ನೀಡಿದ್ದಾನೆ ಎಂದು ಹೇಳಿದ್ದ.
ವಿಚಾರಣೆ ಮುಂದುವರೆಸಿದ ಪೊಲೀಸರಿಗೆ ಮಂಜುಶ್ರೀ ಈ ಹಿಂದೆ ಓರ್ವನನ್ನು ಮದುವೆಯಾಗಿ ಹತ್ತು ವರ್ಷಗಳ ನಂತರ ಡೈವೋರ್ಸ್ ಪಡೆದಿದ್ದಳು. ಬಳಿಕ ಶ್ರೀಕಾಂತ್ ಜೊತೆಗೆ ಏಳು ವರ್ಷ ಲಿವ್- ಇನ್- ರಿಲೆಷನ್‍ಶಿಪ್‍ನಲ್ಲಿದ್ದಳು. ಇದಾದ ಬಳಿಕ ಶ್ರೀಕಾಂತ್ ಬಿಟ್ಟು ಅರುಣ್ ಜೊತೆಗೆ ಲಿವ್- ಇನ್- ರಿಲೆಷನ್‍ಶಿಪ್‍ನಲ್ಲಿದ್ದಳು ಎಂಬುದು ಗೊತ್ತಾಗಿದೆ.