ಇಂಡಿಯಲ್ಲಿ ರೌಡಿಶೀಟರ್‌ಗಳಿಗೆ ಪರೇಡ್..!
ಇಂಡಿ : ಎಮ್ ಓ ಬಿ ಹಾಗೂ ಇತ್ತೀಚೆಗೆ ಭೀಮಾತೀರದಲ್ಲಿ ನಡೆದ ಗುಂಡಿನ ದಾಳಿ ಹಿನ್ನಲೆ ಭೀಮಾತೀರದಲ್ಲಿ ರೌಡಿಶೀಟರ್‌ಗಳಿಗೆ ಇಂಡಿ ಶಹರ ಸಿಪಿಐ ರತನಕುಮಾರ ಜಿರಗ್ಯಾಳ ಹಾಗೂ ಪಿಎಸ್ಐ ವಿನೋದ ದೊಡ್ಡಮನಿ ನೇತೃತ್ವದಲ್ಲಿ ರೌಡಿಶೀಟರ್‌ಗಳಿಗೆ ಪರೇಡ್ ನಡೆಯಿತು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಇಂಡಿ ಶಹರ ಪೊಲೀಸ ಠಾಣಾ ಆವರಣದಲ್ಲಿ ರೌಡಿಶೀಟರ್‌ಗಳಿಗೆ ಪಿಎಸ್ಐ ವಿನೋದ ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೇ, ಯಾವುದೇ ಗ್ಯಾಂಗ್ ವಾರ್, ಗಲಭೆ ಸೇರಿದಂತೆ ವಿವಿಧ ಕ್ರೈಂಗಳಲ್ಲಿ ಭಾಗವಹಿಸಿದ್ರೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರೌಡಿಶೀಟರ್‌ಗಳಿಗೆ ವಾರ್ನಿಂಗ್ ನೀಡಿದರು. ಇನ್ನೂ ಇಂಡಿ ಬಿಟ್ಟು ಬೇರೆಡೆಗೆ ಹೋದ್ರೇ ಲೈವ್ ಲೋಕೇಷನ್ ಕಳಸಬೇಕು ಅಥವಾ ವಿಡಿಯೋ ಕಾಲ್ ಮಾಡಿ ಮಾಹಿತಿ ನೀಡಬೇಕು ಎಂದು ರೌಡಿಶೀಟರ್‌ಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಿ ಎಸ್ ಐ ಶಶಿಕಲಾ ಲಂಗೋಟಿ, ಪೋಲಿಸ್ ಸಿಬ್ಬಂದಿ ಸಿ.ಎಸ್. ರಾಠೋಡ ಹಾಗೂ ಎಮ್ ಜಿ ಸಾವಳೆ ಉಪಸ್ಥಿತರಿದ್ದರು.