ಎಕರೆಗೆ 172 ಟನ್ ಕಬ್ಬು ಬೆಳೆದ ಲಚ್ಯಾಣ ಗ್ರಾಮದ ರೈತ ಶ್ರೀಮಂತ ಇಂಡಿ
ಇಂಡಿ: ಎಕರೆಗೆ ೧೭೨ ಟನ್ ಕಬ್ಬು ಬೆಳೆದ ಲಚ್ಯಾಣ ಗ್ರಾಮದ ರೈತ ಶ್ರೀಮಂತ ಇಂಡಿ ಅವರ ತೋಟಕ್ಕೆ ಜವಳಿ, ಕಬ್ಬು ಅಭಿವೃಧ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಆಧುನಿಕ ವ್ಯವಸಾಯದ ಕುರಿತು ಸಮಗ್ರವಾಗಿ ಚರ್ಚಿಸಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರಿಗಾಗಿ ಸರಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ಆದರೆ ಅದಕ್ಕೆ ದರ ನಿಗದಿ ಮಾತ್ರ ಯಾವ ಸರಕಾರಗಳೂ ಮಾಡುತ್ತಿಲ್ಲ. ರೈತರಾದ ನಾವು ಮೊದಲು ಉತ್ತಮವಾದ ಬೆಳೆಗಳನ್ನು ಬೆಳೆಯಲು ಪ್ರಯತ್ನ ಮಾಡೋಣ. ಲಚ್ಯಾಣದ ಶ್ರೀಮಂತ ಇಂಡಿ ಅವರು ಒಂದು ಎಕರೆ ಪ್ರದೇಶದಲ್ಲಿ ೧೭೦ ಕ್ಕೂ ಹೆಚ್ಚು ಟನ್ ಕಬ್ಬು ಬೆಳೆ ಬೆಳೆದಿದ್ದಾರೆ. ರೈತರು ಅವರು ಅನುಸರಿದ ಕ್ರಮಗಳ ಬಗ್ಗೆ ತಿಳಿದುಕೊಂಡು ಹೆಚ್ಚಿನ ಇಳುವರಿ ಬರುವಂತೆ ನೋಡಿಕೊಳ್ಳೋಣ ಎಂದರು.
ರೈತ ಶ್ರೀಮಂತ ಇಂಡಿ ಮಾತನಾಡಿ, ನಾನು ಮೊದಲು ಪ್ರತೀ ಎಕರೆಗೆ ೧೦೦ ಟನ್ ಕಬ್ಬು ಬೆಳೆಯಬೇಕೆಂದು ಶಪಥ ಮಾಡಿದೆ. ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಕೇಶ್ವರದ ವಿಜ್ಞಾನಿ ಸಂಜಯ್ ಪಾಟೀಲ ಅವರ ಮಾರ್ಗದರ್ಶನದಿಂದ ಯಾವ ಸಮಯಕ್ಕೆಡ ಯಾವ ಗೊಬ್ಬರ ನೀಡಬೇಕು ಎಂಬುದರ ಬಗ್ಗೆ ಕೇಳಿ ಸಮಯಕ್ಕೆ ಸರಿಯಾಗಿ ಡ್ರಿಪ್ ಮೂಲಕ ನೀರಿನಲ್ಲಿಯೇ ಗೊಬ್ಬರ ಬಿಟ್ಟು ೧೨ ತಿಂಗಳಲ್ಲಿ ನಾನು ಅಂದುಕೊAಡಿದ್ದಕ್ಕಿAತ ಹೆಚ್ಚಿನ ಇಳುವರಿ ಬರುವಂತಾಯಿತು. ತದರಿಂದ ನನಗೆ ಖುಷಿಯಾಗಿದೆ. ಮುಂದೆ ೫೦೦ ಎಕರೆಯಲ್ಲಿ ಕಬ್ಬು ಬೆಳೆದು ಎಕರೆಗೆ ಕನಿಷ್ಠ ೧೫೦ ಟನ್ ಬರುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆವಿಕೆ ಮುಖ್ಯಸ್ಥ ಶಿವಶಂಕರಮೂರ್ತಿ, ಸುಭಾಸ ಇಂಡಿ, ನಾರಾಯಣ ಸಾಳುಂಕೆ, ಶ್ರೀಶೈಲ ಕೋರಳ್ಳಿ, ಎಸ್.ಟಿ. ಪಾಟೀಲ, ಈಶ್ವರ ಪಾಟೀಲ, ಮಲಕಣ್ಣ ಗುಬ್ಯಾಡ, ಅಶೋಕಗೌಡ ಪಾಟೀಲ, ಈರಣ್ಣ ಮುಜಗೊಂಡ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಲಚ್ಯಾಣ ಗ್ರಾಮದ ರೈತ ಶ್ರೀಮಂತ ಇಂಡಿ ಅವರ ತೋಟಕ್ಕೆ ಜವಳಿ, ಕಬ್ಬು ಅಭಿವೃಧ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಆಧುನಿಕ ವ್ಯವಸಾಯದ ಕುರಿತು ಸಮಗ್ರವಾಗಿ ಚರ್ಚಿಸಿ ಪರಿಶೀಲನೆ ನಡೆಸಿದರು.

















