ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಪರಾಮರ್ಶೆ
ವಿಜಯಪುರ-ಜೂ-೦೯: ವಿಜಯಪುರ ಲೋಕಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಪರಾಮರ್ಶೆ ಕುರಿತು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಚಿಂತನ ಮಂಥನ ಸಭೆ ಮಾಡಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ ನೈತಿಕವಾಗಿ ನಾವು ಗೆದ್ದಿದ್ದೇವೆ. ಇಡೀ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಿದ್ದು, ನಮಗೆಲ್ಲರಿಗೆ ತೃಪ್ತಿ ತಂದಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ೫ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಾಗಲೂ ಜನತೆ ನಮಗೆ ಬೆಂಬಲಿಸದಿರುವುದು ಬೇಸರವಾಗಿರಬಹುದು. ಆದರೂ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮಾಜಗಳು ಬೆಂಬಲಿಸಿ ಬಿಜೆಪಿಯವರ ಓಟಕ್ಕೆ ಬ್ರೆಕ್ ಹಾಕಿದ್ದು, ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದ್ದು, ಯಾರೂ ದೃತಿಗೆಡುವ ಅವಶ್ಯಕತೆ ಇಲ್ಲ. ಇದಕ್ಕಾಗಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದಂತಹ ಎಲ್ಲಾ ಮತದಾರ ಪ್ರಭುಗಳಿಗೆ ಪಕ್ಷದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಪಕ್ಷವು ಇಂದು ಸೋಲಲು ಅನೇಕ ಕಾರಣಗಳಿರಬಹುದು. ಮುಂದಿನ ದಿನಗಳಲ್ಲಿ ಸರಿ ಮಾಡಲಾಗುವುದು. ಇಂದು ದೇಶದಲ್ಲಿ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿ ಜನ ಬಿಜೆಪಿಯ ವಿರುದ್ಧ ಇರುವುದು ಸಾಬೀತಾಗಿದೆ. ರಾಹುಲ ಗಾಂಧಿ ರವರು ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ರೈತರ, ಯುವಕರ ಹಿತ ಕಾಪಾಡುವ ನಿಟ್ಟಿನಲ್ಲಿ ಹೋರಾಟ ಮಾಡಿರುವುದೇ ಇಂದು ಜನ ನಮ್ಮ ಕೈ ಹಿಡಿದಿರುತ್ತಾರೆ. ನಾವೆಲ್ಲರೂ ಹೀಗೆಯೇ ಒಟ್ಟಾಗಿ ಪಕ್ಷದ ಸಂಘಟನೆ ಬಲಪಡಿಸುವುದರ ಜೊತೆಗೆ ಗಟ್ಟಿಯಾಗಿ ನಿಂತು ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಜನ ಮುಖಂಡರು ಸಲಹೆ ಸೂಚನೆಗಳನ್ನು ನೀಡಿ ಚರ್ಚಿಸುತ್ತಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಟಪಾಲ, ಪ್ರಭುಗೌಡ ಪಾಟೀಲ, ಬಿ.ಎಸ್. ಪಾಟೀಲ ಯಾಳಗಿ, ವೈಜನಾಥ ಕರ್ಪೂರಮಠ, ಸುಭಾಸ ಛಾಯಾಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆರತಿ ಶಹಾಪೂರ, ಬಸೀರ ಶೇಠ, ಆರ್.ಡಿ. ಹಕ್ಕೆ, ಗುರು ತಾರನಾಳ, ರಫೀಕ ಪಕಾಲೆ, ಜಾವಿದ ಮೋಮಿನ್, ಪಕ್ಷದ ಮುಖಂಡರಾದ ಎಂ.ಎಸ್. ನಾಯಕ, ಡಿ.ಎಚ್. ಕಲಾಲ, ಇಲಿಯಾಸಅಹ್ಮದ ಸಿದ್ದಿಕಿ, ಇಲಿಯಾಸ ಬೋರಾಮಣಿ, ಅಮಿತ ಚವ್ಹಾಣ, ಶಬ್ಬೀರ ಜಾಗೀರದಾರ, ವಿಜಯಕುಮಾರ ಘಾಟಗೆ, ಬಿ.ಎಸ್. ಗಸ್ತಿ, ದಸ್ತಗೀರ ಸಾಲೋಟಗಿ, ಲಕ್ಷಿö್ಮÃ ಶಿವಣಗಿ, ಮುಂತಾದವರು ಸಲಹೆಗಳನ್ನು ನೀಡಿ ಮಾತನಾಡಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ಹಮೀದ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಆಜಾದ ಪಟೇಲ, ಸುಭಾಸ ಕಾಲೇಬಾಗ, ಶಾಜಾನ ಮುಲ್ಲಾ, ಬಾಳನಗೌಡ ಪಾಟೀಲ, ಮೀರಾಸಾಬ ಮುಲ್ಲಾ, ಅಂಗ ಘಟಕಗಳ ಅಧ್ಯಕ್ಷರುಗಳಾದ ಹರೀಶ ಕವಲಗಿ, ಲಾಲಸಾಬ ಕೊರಬು, ಎಂ.ಬಿ. ಮೆಂಡೆಗಾರ, ರಾಜೇಶ್ವರಿ ಚೋಳಕೆ, ರಫೀಕ ಕಾಣೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಸಾಯಿಕುಮಾರ ಬಿಸನಾಳ, ಹಾಜಿ ಪಿಂಜಾರ, ಸಲೀಮ ಪೀರಜಾದೆ, ಎಂ.ಎA. ಮುಲ್ಲಾ, ಅಶ್ಫಾಕ ಮನಗೂಳಿ, ಹಮೀದ ಅವಟಿ, ಪರಶುರಾಮ ಹೊಸಮನಿ, ಸುಂದರಪಾಲ ಚವ್ಹಾಣ, ಲಕ್ಷಿö್ಮ ಕ್ಷೀರಸಾಗರ, ಭಾರತಿ ಹೊಸಮನಿ, ಕಾಶಿಬಾಯಿ ಹಡಪದ, ಸಮಿಮಾ ಅಕ್ಕಲಕೋಟ, ಸರಿತಾ ನಾಯಕ, ಫಿರೋಜ ಶೇಖ, ಎಂ.ಎ. ಬಕ್ಷಿ, ಅಬುಬಕರ ಕಂಬಾಗಿ, ಎಂ.ಎಚ್. ರೋಜಿವಾಲೆ, ಸತೀಶ ಅಡವಿ, ಮಲ್ಲಿಕಾರ್ಜುನ ಯಂಕAಚಿ, ಕೃಷ್ಣಾ ಲಮಾಣಿ, ವಿಜಯಕುಮಾರ ಕಾಳೆ, ಮಲ್ಲು ದೊಡಮನಿ, ಅಶೋಕ ನಾಯ್ಕೋಡಿ, ಅನಿಲ ಸುರಗಿಹಳ್ಳಿ, ರಾಜು ಪವಾರ, ಶ್ರೀಕಾಂತ ಹೊನ್ನುಟಗಿ, ಎಂ.ಎ. ಮೊಕಾಶಿ, ಮಹೇಶ ಶಹಾಪೂರ, ಮುಂತಾದವರು ಉಪಸ್ಥಿತರಿದ್ದರು.