ತಂದೆ ಕಂಡ ಕನಸ್ಸು, ನನಸ್ಸು ಮಾಡಿದ ನೂತನ ಗ್ರಾ.ಪಂ ಅಧ್ಯಕ್ಷ ಭೀಮನಗೌಡ..!
ಚಡಚಣ : ರೇವಣಸಿದ್ಧೇಶ್ವರ ಏತ ನಿರಾವರಿ ಯೋಜನೆ ಕಾಮಗಾರಿ ಶಿಘ್ರದಲ್ಲಿ ಆರಂಭಗೊಳ್ಳಲಿದ್ದು, ಆ ಯೋಜನೆಯಡಿ ದೇವರ ನಿಂಬರಗಿ ಗ್ರಾಮದ ಹಳ್ಳಕ್ಕೆ ಒಂದು ವರ್ಷದಲ್ಲಿ ನೀರು ಹರಿಸಲಾಗುವದು ಎಂದು ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ತಾಲ್ಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಚುನಾವಣೆ 7 ಅಗಸ್ಟ್ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಭೀಮನಗೌಡ ಬಿರಾದಾರ ಅಧ್ಯಕ್ಷರಾಗಿ, ಕಮಲಾಬಾಯಿ ಬಾಲಗಾಂವ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ತದನಂತರ ಶಾಸಕ ವಿಠ್ಠಲ ಕಟಕಧೊಂಡ ಹಾಗೂ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕದೊಂಡ ಜನರನ್ನು ಉದ್ದೇಶಿಸಿ ಮಾತಾನಾಡಿದರು. ನೂತನ ಅಧ್ಯಕ್ಷ ಭೀಮನಗೌಡ ಬಿರಾದಾರ ಅವರ ತಂದೆ ಕಂಡು ಕನಸ್ಸು ಇಂದು ನನಸ್ಸು ಮಾಡಿದ್ದಾರೆ. ಭೀಮನಗೌಡರ ಅವರ ತಂದೆ ಗ್ರಾ.ಪಂ ಅಧ್ಯಕ್ಷ ಆಗುವ ಕನಸ್ಸು ಕಂಡಿದ್ದರು. ಅದು ಇಂದು ಯಶಸ್ವಿಯಾಗಿದೆ. ಇದಲ್ಲದೆ ಒಗ್ಗಟಿನ ಬಲದಲ್ಲಿ ಶಕ್ತಿ ಇದೆ ಎಂಬುದಕ್ಕೆ ಈ ಯಶಸ್ವಿ ಕಾರಣ. ಆ ಒಗ್ಗಟಿನ ಫಲವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋದವಾಗಿ ಆಯ್ಕೆ ಮಾಡಿರುವ ಕೀರ್ತಿ ದೇವರ ನಿಂಬರಗಿ ಗ್ರಾಮಕ್ಕೆ ಸಲ್ಲುತ್ತದೆ. ಬಹುತೇಕ ಇಂದಿನ ಗ್ರಾಮ ಪಂಚಾಯತ್ ಚುನಾವಣೆಗಳು ಸುಮಾರು ದಿನಗಳ ಮನೆ ಮಠ ಬಿಟ್ಟು, ಕೆಲಸ ಕಾರ್ಯ ಬಿಟ್ಟು, ಕಾಲಹರಣ ಮಾಡುವ,ದುಂದು ವೆಚ್ಚ ಮಾಡುವ ಚುನಾವಣೆಯಾಗಿದ್ದು ಸಾಲಶೂಲಕ್ಕೆ ಎಡೆಮಾಡಿಕೊಡುತ್ತದೆ. ಆದರೆ ಈ ಬಲಭೀಮ ದೇವರ ಆಶೀರ್ವಾದ ಮತ್ತು ಹಿರಿಯರ ಮಾರ್ಗದರ್ಶನ ದಿಂದಾಗಿ ಯಾವುದಕ್ಕೂ ಅವಕಾಶ ಮಾಡಿಕೊಡದೆ ಅವಿರೋಧವಾಗಿ ಆಯ್ಕೆ ಮಾಡಿದ್ದು ಮಾದರಿ ಗ್ರಾಮ ಪಂಚಾಯತ್ ಮಾಡಲು ಸಹಕಾರವಾಗುತ್ತದೆ. ಗ್ರಾಮದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಭೀಮನಗೌಡ ಬಿರಾದಾರ, ಉಪಾಧ್ಯಕ್ಷೆ ಕಮಲಾಬಾಯಿ ಬಾಲಗಾಂವ, ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧಾನಯ್ಯ ಕರ್ಜಗಿ ಹಾಗೂ ಗ್ರಾಮಸ್ಥರು ಇದ್ದರು.