ನಿವೃತ್ತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮಹತ್ವದ ಮೈಲುಗಲ್ಲು
ಇಂಡಿ : ಸರಕಾರ ನಿಯಮದ ಅನುಸಾರ ಪ್ರತಿ ವ್ಯಕ್ತಿಯು
ವೃತ್ತಿಯಿಂದ ನಿವೃತಿ ಹೊಂದಬೇಕು. ಹೀಗಾಗಿ ನಿವೃತ್ತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮಹತ್ವದ ಮೈಲುಗಲ್ಲು ಎಂದು ಸಮಾಜ ಕಲ್ಯಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಹೇಳಿದರು.
ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ
ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಐ. ಶಾಬಾದಿ ಇವರಿಗೆ ವೃತ್ತಿಯಿಂದ ನಿವೃತ್ತಿಯಾಗುವ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತ ಶಾಬಾದಿಯವರು ಮಾತನಾಡಿ ಯೌವನದಲ್ಲಿ
ಕಷ್ಟ ಪಟ್ಟು ದುಡಿದ ಪ್ರಯಾಣವು ಕೊನೆಗೊಂಡಿದೆ. ತಮ್ಮ ಸೇವೆ ಸಲ್ಲಿಸುವಾಗ ನೀಡಿದ ಹಿರಿಯ ಅಧಿಕಾರಿಗಳ ಮತ್ತು ಇಲಾಖೆಯ ಎಲ್ಲ ಸಿಬ್ಬಂದಿಯ ಸಹಕಾರ ಮರೆಯಲು ಅಸಾಧ್ಯ ಎಂದರು.
ಇಂಡಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ.ಇಂಡಿ, ವಸತಿ ನಿಲಯ ಪಾಲಕ ಕುಲಪ್ಪ ಕೋರೆ, ಆನಂದ ಕಳಸಗೊಂಡ ಅವರು, ಪ್ರಾಮಾಣಿಕ ಸೇವೆ ಕೊಂಡಾಡಿದರು. ಸಮಾರಂಭದಲ್ಲಿ ತಾಲೂಕಿನ ಎಲ್ಲ ವಸತಿ ನಿಲಯ ಪಾಲಕರು ಇಲಾಖೆಯ ಸಿಬ್ಬಂದಿ ಮತ್ತಿತರಿದ್ದರು.ಇದೆ ವೇಳೆ ಶಾಬಾದಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಇಂಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಾಬಾದಿ ದಂಪತಿಗಳನ್ನು
ಸನ್ಮಾನಿಸಲಾಯಿತು..