ಇಂಡಿ : ಶಹರ ಪೋಲಿಸ್ ಠಾಣಾ ವ್ಯಾಪ್ತಿ ಹೆಚ್ಚಿಸಲು ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳೆಂಕೆ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳಿಗೆ ಮನವಿ ಮಾಡಿದರು.
ಬುಧವಾರ ಶಹರ ಪೋಲಿಸ್ ಠಾಣಾಯಲ್ಲಿ ಆಯೋಜಿಸಿದ್ದ ಬಕ್ರೀದ್ ಹಾಗೂ ಚೌಡಮ್ಮ ಜಾತ್ರೆ ನಿಮತ್ಯ ಶಾಂತಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದಿಂದ ಸುಮಾರು 10 ಕಿಮೀ ವ್ಯಾಪ್ತಿಯ ಬರುವ ಹಳ್ಳಿಗಳು ಶಹರ ಪೋಲಿಸ್ ಠಾಣೆಗೆ ಸೆರ್ಪಡೆಗೊಳಿಸಿ ಶಹರ ಪೋಲಿಸ್ ಠಾಣೆಗೆ ಮೆರಗು ತರಬೇಕು. ಈ ಹಿಂದೆ ಶಹರ್ ಮತ್ತು ಗ್ರಾಮೀಣ ಠಾಣೆ ಒಂದೇಯಾಗಿತ್ತು. ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಮತ್ತು ಆಡಳಿತದ ಹಿತದೃಷ್ಟಿಯಿಂದ ಗ್ರಾಮೀಣ ಮತ್ತು ಶಹರ ಠಾಣೆ ಎಂದು ಇಬ್ಬಾಗ ಮಾಡಲಾಗಿದೆ. ಆದರೆ ಆಡಳಿತ ಹಿತ ದೃಷ್ಟಿಯಿಂದಶಹರ್ ಠಾಣೆಗೆ ಇನ್ನೊಂದಿಷ್ಟು ಹಳ್ಳಿಗಳು ಸೇರ್ಪಡೆ ಮಾಡುವುದರಿಂದ ಒಳ್ಳೆಯದು ಆಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭೀಮನಗೌಡ ಪಾಟೀಲ, ಸತೀಶ ಕುಂಬಾರ, ಅಯೂಬ್ ನಾಟೀಕಾರ ಮಾತನಾಡಿ ಪಟ್ಟಣ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಹಾಗಾಗಿ ಯಾವುದೆ ಕಾರಣಕ್ಕೂ ಕೆಟ್ಟ ಹೆಸರು ತರಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.
ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿದ ಶಹರ್ ಪೋಲಿಸ್ ಠಾಣಾ ಸಿಪಿಐ ರತನಕುಮಾರ ಜಿರಗ್ಯಾಳ ಮಾತನಾಡಿ
ಯಾವುದೇ ಸಮುದಾಯವಾಗಿರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ, ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ. ಹೀಗಾಗಿ ಶಾಂತಿ ಭಂಗ ತರುವ ಯಾವುದೇ ಹೇಳಿಕೆಗಳು. ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು
ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದ್ದು, ಸಭೆಯಲ್ಲಿನ ಮುಖಂಡರು ಯುವಕರಿಗೆ ತಿಳಿ ಹೇಳಬೇಕು ಎಂದ ಅವರು ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈಸ್ ಅಷ್ಟೇಕರ, ಶ್ರೀಧರ ಕ್ಷೇತ್ರಿ, ಮಲ್ಲು ದೇವರ ಹಾಗೂ ಶಹರದ ಮುಖಂಡರು, ಪೋಲಿಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.