• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

    ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

    ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

    ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

    ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

    ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

    ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

    ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

    ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

    ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

      ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

      ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

      ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

      ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

      ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

      ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

      ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

      ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

      ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

      ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

      ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

      ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

      ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ಜಿಲ್ಲೆಯಲ್ಲಿ ಹೆಸರಾಂತ ಕಂಪನಿಗಳು ಹೂಡಿಕೆಗೆ ಆಸಕ್ತಿ

      Voiceofjanata.in

      January 29, 2026
      0
      ಜಿಲ್ಲೆಯಲ್ಲಿ ಹೆಸರಾಂತ ಕಂಪನಿಗಳು ಹೂಡಿಕೆಗೆ ಆಸಕ್ತಿ
      0
      SHARES
      25
      VIEWS
      Share on FacebookShare on TwitterShare on whatsappShare on telegramShare on Mail

      ಜಿಲ್ಲೆಯಲ್ಲಿ ಹೆಸರಾಂತ ಕಂಪನಿಗಳು ಹೂಡಿಕೆಗೆ ಆಸಕ್ತಿ

      ಭವಿಷ್ಯದಲ್ಲಿ ಮ್ಯಾನುಫ್ಯಾಕ್ಚರ್ ಕ್ಲಸ್ಟರ್ ಆಗಲಿರುವ ವಿಜಯಪುರ ಜಿಲ್ಲೆ-ಸಚಿವ ಡಾ.ಎಂ.ಬಿ.ಪಾಟೀಲ

       

      ವಿಜಯಪುರ ಜ.26 : ಬರದ ನಾಡು ಎಂಬ ಹಣೆಪಟ್ಟಿ ಅಂಟಿಕೊಂಡಿದ್ದ ವಿಜಯಪುರ ಜಿಲ್ಲೆಯಲ್ಲಿ ಹೆಸರಾಂತ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಈ ಭಾಗದಲ್ಲಿ ವಿವಿಧ ಕಾರ್ಖಾನೆ ಕಂಪನಿಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೇ, ಭವಿಷ್ಯದಲ್ಲಿ ವಿಜಯಪುರ ಜಿಲ್ಲೆಯ ಮ್ಯಾನುಫ್ಯಾಕ್ಚರ್ ಕ್ಲಸ್ಟರ್‍ವಾಗಿ ರೂಪಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.

      ಜಿಲ್ಲಾಡಳಿತದ ವತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ,ನಂತರ ಧ್ವಜವಂದನೆ ಸ್ವೀಕರಿಸಿ,ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಸ್ವಿಟ್ಜರ್ಲೆಂಡ್ ದೇಶದ ದಾವೋಸ್ ನಗರದಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ನಾನು ನೋಕಿಯಾ, ಟಾಟಾ ಸನ್ಸ್, ವಾಸ್ಟ್ ಸ್ಪೇಸ್ ಇನ್ನೂ ಮುಂತಾದ 50ಕ್ಕೂ ಹೆಚ್ಚು ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದೇನೆ. ಈ ಪೈಕಿ ಆರ್.ಪಿ-ಸಂಜೀವ್ ಗೊಯೆಂಕಾ ಕಂಪನಿಯು ಮರುಬಳಕೆ ಇಂಧನ ಕ್ಷೇತ್ರದಲ್ಲಿ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ಜಿಲ್ಲೆಯ ಯುವಜನರಿಗೆ ಇಲ್ಲೇ ಉಜ್ವಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.

      ಕೆಲವು ತಿಂಗಳ ಹಿಂದೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿಜಯಪುರ-ಬೆಳಗಾವಿ- ಧಾರವಾಡ ಜಿಲ್ಲೆಗಳನ್ನು ಒಳಗೊಂಡ ರಕ್ಷಣಾ ಕಾರಿಡಾರ್ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡು, ಗಮನ ಸೆಳೆಯಲಾಗಿದೆ.
      ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣವು ಮುಂದೆ ಇದರ ಲಾಭ ಪಡೆಯಲಿದೆ. ಇದರಿಂದ ಕಿತ್ತೂರು ಕರ್ನಾಟಕದ ಆರ್ಥಿಕ ಚಹರೆಯೇ ಬದಲಾಗಲಿದೆ. ನಾನಾ ಹೆಸರಾಂತ ಕಂಪನಿಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 45 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಿಲ್ಲೆಯು ಭವಿಷ್ಯದಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಕ್ಲಸ್ಟರ್ ಆಗಿ ರೂಪುಗೊಳ್ಳಲಿದೆ ಎಂದು ಅವರು ಹೇಳಿದರು.

      ಸಂವಿಧಾನ ಬದ್ಧವಾದ ಮೌಲ್ಯಯುತ ಪರಂಪರೆಯಲ್ಲಿ ಮತ್ತು ಅಖಂಡತೆಯ ತತ್ವದಲ್ಲಿ ನಂಬಿಕೆಯಿಟ್ಟು, ಜಾತ್ಯಾತೀತ ಭವ್ಯತೆಯನ್ನು ಮತ್ತು ಸಾರ್ವಭೌಮತೆಯನ್ನು ಸಂರಕ್ಷಿಸಿಕೊಂಡು ಜನಪರ ಆಡಳಿತ ನೀಡುತ್ತಿರುವ ನಮ್ಮ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸಮರ್ಥ ನಾಯಕತ್ವದಲ್ಲಿ ನಮ್ಮ ಕರ್ನಾಟಕ ಸರ್ಕಾರವು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಕಾಳಜಿ ಪೂರ್ವಕವಾದ ಪಾರದರ್ಶಕ ಆಡಳಿತ ನೀಡುತ್ತ ರಾಜ್ಯದ ಸರ್ವ ಜನರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿಶೇಷವಾಗಿ ಸಂವಿಧಾನದ ಮಹತ್ವದ ಕುರಿತು ಜಾಗೃತಿಯನ್ನು ಮೂಡಿಸಲು ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಆತ್ಮವೆಂದೆ ಕರೆಯಲ್ಪಡುವ ಪೀಠಿಕೆಯನ್ನು ಅಳವಡಿಸಲಾಗಿರುತ್ತದೆ.
      ಪ್ರತಿನಿತ್ಯ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆಗಳನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವುದರ ಮೂಲಕ ಸಂವಿಧಾನದ ಜಾಗೃತಿಯನ್ನು ಮಾಡುವುದರೊಂದಿಗೆ ನಮ್ಮ ಸರ್ಕಾರ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ ಎಂದು ಅವರು ಹೇಳಿದರು.

      *ದೇಶಾದ್ಯಂತ ಸಂಚಲನ ಸೃಷ್ಟಿಸಿದ ಕರ್ನಾಟಕ ಸರ್ಕಾರದ “ಪಂಚ ಗ್ಯಾರಂಟಿ” ಯೋಜನೆಗಳು* : ನಮ್ಮ ಸರ್ಕಾರದ ಹೆಮ್ಮೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ವಿಜಯಪುರ ಜಿಲ್ಲೆಯಲ್ಲಿ, ಅತ್ಯಂತ ಯಶಸ್ವಿಗೊಳಿಸುತ್ತಿರುವುದು ಶ್ಲಾಘನೀಯವಾಗಿದೆ. ನಾಡಿನ ಬಡವರ ಹಸಿವು ನೀಗಿಸಿ ಬಡವರ ಮತ್ತು ಜನಪರ ಸರಕಾರವೆಂದು ಹೆಸರು ತಂದು ಕೊಟ್ಟಿದ್ದು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಅನ್ನಭಾಗ್ಯ” ಯೋಜನೆ. ಈ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 16 ಕೋಟಿ 55 ಲಕ್ಷ ಜನರು ಫಲಾನುಭವಿಗಳಾಗಿದ್ದು ಒಟ್ಟು ಇಲ್ಲಿಯವರೆಗೂ 457 ಕೋಟಿ ಖರ್ಚಾಗಿರುತ್ತವೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 5 ಲಕ್ಷ 3 ಸಾವಿರ ಫಲಾನುಭವಿಗಳಿದ್ದು, ಇದುವರೆಗೆ 2184 ಕೋಟಿ 34 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ.“ಉoಟಜeಟಿ booಞ oಜಿ ತಿoಡಿಟಜ ಡಿeಛಿoಡಿಜs ಛಿeಡಿಣiಜಿiಛಿಚಿಣe oಜಿ exಛಿeಟಟeಟಿಛಿe” ಪುರಸ್ಕಾರಕ್ಕೆ ಬಾಜನವಾಗುವ ಮೂಲಕ ದೇಶದಲ್ಲಿಯೇ ವಿಶೇಷ ಮನ್ನಣಗೆ ಪಾತ್ರವಾಗಿರುವ ಶಕ್ತಿ ಯೋಜನೆಯು ಪಂಚ ಗ್ಯಾರಂಟಿ ಯೋಜನೆಗಳಲ್ಲಿಯೇ ವೈಶಿಷ್ಟ್ಯ ಪೂರ್ಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 17 ಕೋಟಿ 34 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಒಟ್ಟು 584 ಕೋಟಿ 51 ಲಕ್ಷ ರೂಪಾಯಿಗಳ ವೆಚ್ಚ ಭರಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಇದುವರೆಗೂ 4 ಲಕ್ಷ 49 ಸಾವಿರ ಜನರು ಫಲಾನುಭವಿಗಳಾಗಿದ್ದು, ಒಟ್ಟು 521 ಕೋಟಿ 37 ಲಕ್ಷ ವೆಚ್ಚ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಇದುವರೆಗೆ ವಿಜಯಪುರ ಜಿಲ್ಲೆಯಲ್ಲಿ 23 ಸಾವಿರ 62 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದು, ಒಟ್ಟು 41 ಕೋಟಿ 19 ಲಕ್ಷ ವೆಚ್ಚ ಭರಿಸಲಾಗಿದೆ. ಹೀಗೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3788 ಕೋಟಿ 44 ಲಕ್ಷ ರೂಪಾಯಿ ವೆಚ್ಚ ಮಾಡಿ ಸೌಲಭ್ಯ ಒದಗಿಸಲಾಗಿದ್ದು, ಇದರೊಂದಿಗೆ ವಿಜಯಪುರ ಜಿಲ್ಲೆಯ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 340 ಕೋಟಿ ರೂ. ವಿಶೇಷ ಅನುದಾನವನ್ನು ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.

      ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ಹೊಸದಾಗಿ 27 ನಗರ ಸಾರಿಗೆ ವಾಹನಗಳು ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ 75 ವಿದ್ಯುತ್ ಚಾಲಿತ ನಗರ ಸಾರಿಗೆ ಬಸ್ಸುಗಳು ಸಾರ್ವಜನಿಕರಿಗೆ ಸೌಲಭ್ಯ ಒದಗಿಸುತ್ತಿವೆ. ಸಿಂದಗಿಯ ಬಸ್ ನಿಲ್ದಾಣಕ್ಕೆ “ಶ್ರೀ.ಚನ್ನವೀರ ಮಹಾಸ್ವಾಮಿ”, ದೇವರ ಹಿಪ್ಪರಗಿ ಬಸ್ ನಿಲ್ದಾಣಕ್ಕೆ “ಮಡಿವಾಳ ಮಾಚಿ ದೇವರ” ಹಾಗೂ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ “ವೀರ ರಾಣಿ ಕಿತ್ತೂರು ಚೆನ್ನಮ್ಮ” ಎಂದು ನಾಮಕರಣ ಮಾಡಲಾಗಿದೆ. ಅನ್ನದಾತ ಸುಖಿಭವ ಎಂಬ ಉಕ್ತಿಯಂತೆ ಮುಖ್ಯವಾಗಿ ರೈತರ ಹಿತಾಸಕ್ತಿಯನ್ನು ಕಾಪಾಡಲು ಹಗಲಿನಲ್ಲಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ತನ್ನು ಪ್ರತಿನಿತ್ಯ ನೀಡುವ ಉದ್ದೇಶದೊಂದಿಗೆ ಹೆಸ್ಕಾಂ ವಿಜಯಪುರದಿಂದ ಅರ್ಜುಣಗಿ, ಹಡಗಲಿ, ಕಾಖಂಡಕಿ, ಭೈರುಣಗಿ, ಉಮರಜ, ಕಣಕಾಲ, ದಿಂಡವಾರ ಗ್ರಾಮಗಳಲ್ಲಿ 110/11 ಕೆ.ವ್ಹಿ ವಿದ್ಯುತ್ ಉಪಕೇಂದ್ರಗಳನ್ನು ಕಾರ್ಯಾರಂಭಿಸಲಾಗಿದೆ.

      ಗಂಗಾಕಲ್ಯಾಣ ಯೋಜನೆಯಡಿ ಸುಮಾರು 610 ರೈತರ ಜಮೀನುಗಳಲ್ಲಿ 555 ಕೊಳವೆ ಬಾವಿಗಳಿಗೆ 18 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಕಂದಾಯ ಇಲಾಖೆಯಡಿ ಜಿಲ್ಲೆಯಲ್ಲಿ ದಾಖಲೆ ರಹಿತ ಪ್ರದೇಶಗಳ ಅಥವಾ ತಾಂಡಾಗಳ 193 ಪ್ರದೇಶಗಳನ್ನು ಹೊಸ “ಕಂದಾಯ ಗ್ರಾಮ”ಗಳನ್ನಾಗಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ಈ ತಾಂಡಾ ಪ್ರದೇಶಗಳಲ್ಲಿ ಇರುವ ಮನೆಗಳಿಗೆ ಈಗಾಗಲೇ 13,287 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಈ ಮೂಲಕ ತಾಂಡಾದ ಜನವಸತಿ ಪ್ರದೇಶಗಳನ್ನು ಗುರುತಿಸಿ, ಅಧಿಕೃತವಾಗಿ ಮಾನ್ಯತೆ ನೀಡಿದಂತಾಗಿರುತ್ತದೆ ಎಂದು ಹೇಳಿದರು.

      ಭೂಸುರಕ್ಷಾ ಯೋಜನೆಯಡಿ ಗಣಕೀಕೃತ ದಾಖಲೆಗಳನ್ನು ಆನ್‍ಲೈನ್ ಮೂಲಕ ಪಡೆದುಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯ ಒಟ್ಟು 13 ತಾಲೂಕಿನ ತಹಶೀಲ್ದಾರ ಕಚೇರಿಗಳಲ್ಲಿ, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸೇರಿ 3 ಕೋಟಿ 75 ಲಕ್ಷ 24 ಸಾವಿರ ಪುಟಗಳ ಸ್ಕ್ಯಾನಿಂಗ್ ಮತ್ತು ಅಪಲೊಡ ಕಾರ್ಯ ಮಾಡಲಾಗಿದೆ.ಕಂದಾಯ ಇಲಾಖೆ ವತಿಯಿಂದ ವಿಜಯಪುರ ಜಿಲ್ಲಾ ಆಡಳಿತ ಕೇಂದ್ರ ಕಟ್ಟಡವಾದ ಪ್ರಜಾ ಸೌಧವು 9 ಎಕರೆ ಜಾಗೆಯಲ್ಲಿ 55 ಕೋಟಿ 60 ಲಕ್ಷ ಅನುದಾನದಲ್ಲಿ ಕರ್ನಾಟಕ ಹೌಸಿಂಗ ಬೋರ್ಡ ವತಿಯಿಂದ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗಿದೆ ಎಂದು ಹೇಳಿದರು.

      ಮಹಾನಗರ ಪಾಲಿಕೆಯ ಅಡಿಯಲ್ಲಿ ಸ್ವಚ್ಛತೆಯ ಸೈನಿಕರೆಂದೇ ಕರೆಯಲ್ಪಡುವ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿಯಲ್ಲಿ ವಿಜಯಪುರ ನಗರದ ಬರಟಗಿ ರಸ್ತೆಯಲ್ಲಿ ಒಟ್ಟು 60 ಪೌರ ಕಾರ್ಮಿಕರಿಗೆ 4 ಕೋಟಿ 95 ಲಕ್ಷ ರೂಪಾಯಿಗಳ ಅನುದಾನದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಮಹಾತ್ಮಾ ಗಾಂಧೀಜಿ ನಗರ ವಿಕಾಸ ಯೋಜನೆಯಡಿಯಲ್ಲಿ 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಿಸಿ ರಸ್ತೆ, ಡಾಂಬರೀಕರಣ, ಒಳಚರಂಡಿ ಕಾಮಗಾರಿಗಳು ಸೇರಿದಂತೆ ಒಟ್ಟು 35 ವಾರ್ಡಗಳಲ್ಲಿ 63 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್.ಜಿ.ಟಿ) ಅನುದಾನದಡಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕದ ಪುನಃಶ್ಚೇತನ ಕಾಮಗಾರಿಯನ್ನು 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

      ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಂಚಾರ ನಿರ್ವಹಣೆಗಾಗಿ, ಪ್ರಮುಖ ವೃತ್ತ ಹಾಗೂ ಜಂಕ್ಷನ್‍ಗಳ ಸುಧಾರಣೆಗಾಗಿ, ಮಳೆ ನೀರು ಹರಿಯುವ ಹೊರಚರಂಡಿ ಕಾಮಗಾರಿಗಾಗಿ, ತಿಕೋಟಾ ತಾಲೂಕಿನ ಹಂಚಿನಾಳ ಗ್ರಾಮದ ಕೆರೆಯ ಪುನಶ್ಚೇತನ ಹಾಗೂ ಸೌಂದರೀಕರಣಕ್ಕಾಗಿ ಹಾಗೂ ನಗರದ ಭಾವಿಗಳ ಪುನಃಶ್ಚೇತಕ್ಕಾಗಿ ಒಟ್ಟು 34 ಕೋಟಿ 36 ಲಕ್ಷಗಳ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಜಿಲ್ಲಾ ಪಂಚಾಯಿತಿ ವಿಜಯಪುರ ಅಡಿಯಲ್ಲಿ ನರೇಗಾ ಯೋಜನೆಯಡಿ 21 ಲಕ್ಷ ಮಾನವ ದಿನಗಳ ಸೃಜನೆ ಮಾಡಿದ್ದು, ಮಹಿಳೆಯರ ಭಾಗವಹಿಸುವಿಕೆಯು ಪ್ರತಿಶತ 53 ರಷ್ಟು ಇರುತ್ತದೆ ಸದರಿ ಯೋಜನೆಯಡಿಯಲ್ಲಿ 4300 ಜನ ವಿಶೇಷ ಚೇತನರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

      ಗ್ರಾಮೀಣ ವಸತಿ ಯೋಜನೆಯ ಬಸವ ವಸತಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿ ಇತ್ತೀಚಿಗೆ 12,475 ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು, ಈ ಪೈಕಿ 5,248 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.ಜಲಜೀವನ ಮಿಷನ್ ಯೋಜನೆಯಡಿ 4 ಹಂತಗಳಲ್ಲಿ 1000 ಜನ ವಸತಿಗಳಲ್ಲಿ 575 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದ 4 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಸಮಗ್ರ ಯೋಜನೆಯ ಜಲಧಾರೆ ಸ್ಕೀಮ್-1 & 2 ರಡಿ ಎಲ್ಲ 13 ಕಂದಾಯ ತಾಲೂಕುಗಳನ್ನು ಒಳಗೊಂಡಂತೆ ಒಟ್ಟು 3059 ಕೋಟಿ ರೂ.ಅಂದಾಜು ಮೊತ್ತದ ಪೈಕಿ 211 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಪ್ರದೇಶಗಳನ್ನು ಸೇರಿ ಇಲ್ಲಿಯವರೆಗೂ ಒಟ್ಟು ರೂ.1864 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಹಾಗೂ ಪ್ರವಾಹ ಪರಿಹಾರ ಯೋಜನೆಯಡಿ 24 ಕೋಟಿ ಅನುದಾನದಲ್ಲಿ 96 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

      ವಿಜಯಪುರ ಮತ್ತು ರಾಜಧಾನಿ ಬೆಂಗಳೂರು ನಡುವಿನ ರೈಲು ಪ್ರಯಾಣದ ಅವಧಿಯನ್ನು ಈಗ ಇರುವ 15-16 ಗಂಟೆಗಳಿಂದ 10 ಗಂಟೆಗಳಿಗೆ ಇಳಿಸಲು ನಾನು ನಿರಂತರವಾಗಿ ಪ್ರಯತ್ನಿಸಿ, ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ನಿರಂತರ ಮಾತುಕತೆ ನಡೆಸಿದ ಫಲವಾಗಿ ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಡಿಸೆಂಬರ್ 25ರಂದು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ವಿಶೇಷ ರೈಲನ್ನು ಓಡಿಸಿದೆ. ಅದರ ನಂತರವೂ ಒಮ್ಮೆ ಓಡಿಸಿದೆ. ಇದನ್ನು ಕಾಯಂ ಮಾಡಬೇಕೆಂದೂ ಒತ್ತಡ ಹೇರಲಾಗುತ್ತಿದ್ದು, ವಿದ್ಯುತ್ ಮಾರ್ಗ ನಿರ್ಮಾಣ ನಂತರ ಅದೂ ಕಾರ್ಯರೂಪಕ್ಕೆ ಬರಲಿದೆ. ಮೈಸೂರು ಮತ್ತು ಪಂಢರಪುರ ನಡುವೆ ಓಡಾಡುವ ರೈಲನ್ನು ಕೂಡ ಇದೇ ರೀತಿ ನಿಯಮಿತ ನಿಲುಗಡೆಗಳೊಂದಿಗೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಓಡಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಜೊತೆಗೆ ಬೆಂಗಳೂರು ಮತ್ತು ವಿಜಯಪುರ ನಡುವೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸೇವೆ ಆರಂಭಿಸಲು ಕೂಡ ನಿರಂತರವಾಗಿ ವ್ಯವಹರಿಸಲಾಗುತ್ತಿದೆ. ಬೆಂಗಳೂರು ಮತ್ತು ವಿಜಯಪುರ ನಡುವೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಕಾಯಂ ಸೇವೆ ಒದಗಿಸಲು ಹೊಸ ರೈಲುಗಳನ್ನು ಮಂಜೂರು ಮಾಡಿಸಿಕೊಳ್ಳಲು ನಮ್ಮ ಪ್ರಯತ್ನಗಳು ಈಗ ಆರಂಭವಾಗಿವೆ. ಇದು ಕೂಡ ಭವಿಷ್ಯದಲ್ಲಿ ಫಲ ಕೊಡಲಿದ್ದು, ಇದರಿಂದ ಜಿಲ್ಲೆಯ ಜನರಿಗೆ ರಾಜ್ಯ ರಾಜಧಾನಿಯು ಮತ್ತಷ್ಟು ಹತ್ತಿರವಾಗಲಿದೆ ಎಂದು ಅವರು ಹೇಳಿದರು.

      ಸರ್ಕಾರ ಕೃμÁ್ಣ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೃμÁ್ಣ ನ್ಯಾಯಾಧೀಕರಣ-2 ರ ಅಂತಿಮ ತೀರ್ಪಿನ ಗೆಜೆಟ್ ಪ್ರಕಟಣೆ ಪಡೆದು ಮುಳುಗಡೆಯಾಗುವ 184 ಗ್ರಾಮಗಳ ಜಮೀನುಗಳ ಭೂಸ್ವಾಧೀನತೆ, 20 ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಯು.ಕೆ.ಪಿ ಹಂತ-3 ರಡಿ ಬರುವ 5.94 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲುವೆ ಜಾಲದ ನಿರ್ಮಾಣವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಲು ಕಂಕಣ ಬದ್ಧವಾಗಿದೆ ಎಂದು ಅವರು ಹೇಳಿದರು.

      ತೋಟಗಾರಿಕೆ ಇಲಾಖೆಯಡಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಲಿಂಬೆಗೆ ಜಿ.ಐ ಟ್ಯಾಗ್ ಮಾನ್ಯತೆ ದೊರಕಿರುವುದರಿಂದ ಲಿಂಬೆ ಅಭಿವೃದ್ಧಿ ಮಂಡಳಿ ಮತ್ತು ಂPಇಆಂ ರವರ ಸಹಯೋಗದೊಂದಿಗೆ 3 ಟನ್ ಲಿಂಬೆಯನ್ನು ಯುಎಇಗೆ ಗೆ ರಫ್ತು ಮಾಡಲಾvದೆ. ತಿಕೋಟಾ ತಾಲೂಕಿನ ಅರಕೇರಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 10 ಕೋಟಿ 11 ಲಕ್ಷ ಅನುದಾನದಲ್ಲಿ 2 ಸಾವಿರ ಮೆಟ್ರಿಕ್ ಟನ್ ಸಾಮಥ್ರ್ಯದ ಕೋಲ್ಡ್ ಸ್ಟೋರೆಜ್ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಒಟ್ಟು 20,532 ರೈತರಿಗೆ 32,095 ಲಕ್ಷ ವಿಮೆ ಮೊತ್ತ ಪಾವತಿಸಲಾಗಿದೆ ಎಂದು ಅವರು ಹೇಳಿದರು.

      ವಿಜಯಪುರ ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಂದಿನಿ ಡೇರಿಯು ಪ್ರತಿ ದಿನ ಸರಾಸರಿ 1 ಲಕ್ಷ 50 ಕೆ.ಜಿ ಹಾಲು ಶೇಖರಿಸಲಾಗುತ್ತಿದ್ದು, ಇದರಲ್ಲಿ 60 ಸಾವಿರ ಕೆ.ಜಿ ಹಾಲು ಮಾರಾಟ 15 ಸಾವಿರ ಕೆ.ಜಿ ಮೊಸರು ಮಾರಾಟ ಮಾಡಲಾಗುತ್ತಿದೆ. ನಂದಿನಿ ಉತ್ಪನ್ನಗಳನ್ನು ನೆರೆಯ ಮಹಾರಾಷ್ರ ರಾಜ್ಯದಲ್ಲಿಯೂ ವಿಸûರಿಸಲಾಗಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು, ಹಾಲಿನ ಉತ್ಪನ್ನಗಳನ್ನು ಒದಗಿಸಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ವತಿಯಿಂದ 2025-26 ನೇ ಸಾಲಿನ ಜಿಲ್ಲೆಯಲ್ಲಿ ಹೊಸದಾಗಿ 24 ಕರ್ನಾಟಕ ಪಬ್ಲಿಕ್ ಶಾಲೆಗಳು(ಕೆ.ಪಿ.ಎಸ್), 12 ಪಿ.ಎಂ.ಶ್ರೀ ಶಾಲೆಗಳು, 6 ಉರ್ದು ಕರ್ನಾಟಕ ಪಬ್ಲಿಕ್ ಮೌಲಾನಾ ಆಜಾದ ಶಾಲೆಗಳು, 23 ಉನ್ನತೀಕರಿಸಿದ ಶಾಲೆಗಳು, 105 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಶಾಲೆಗಳು, 296 ಶಾಲೆಗಳಲ್ಲಿ ಪೂರ್ವ, ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಮಂಜೂರಾತಿ ದೊರೆತಿದೆ. ಅಲ್ಲದೇ, ಮೂಲಸೌಲಭ್ಯಗಳನ್ನು ಒಳಗೊಂಡ 90 ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಉತ್ತಮಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

      ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಕೇರ್ ಕಟ್ಟಡ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಾಯಿ ಹಾಲು ಸಂಗ್ರಹಣಾ ಕೇಂದ್ರ, 10 ಹಾಸಿಗೆಯ ಕಣ್ಣಿನ ಶಸû್ರ ಚಿಕಿತ್ಸಾ ಘಟಕ, ಆಯ್.ಪಿ.ಎಚ್.ಎಲ್ ಪ್ರಯೋಗ ಶಾಲೆ, ಕ್ಯಾನ್ಸರ್ ರೋಗಿಗಳಿಗಾಗಿ 10 ಹಾಸಿಗೆಯ ಕೀಮೋ ಥೆರಪಿ ಘಟಕ ಹಾಗೂ ಇಂದಿರಾ ಕ್ಯಾಂಟೀನ್ ಸೇರಿದಂತೆ ಎಲ್ಲವೂ ಕಾರ್ಯರಂಭಗೊಂಡು ಸಾರ್ವಜನಿಕ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

      ವಿಜಯಪುರ ನಗರದಲ್ಲಿರುವ ಪಾರಂಪರಿಕ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಜಿಲ್ಲೆಯಲ್ಲಿ ಅರಣ್ಯೀಕರಣ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಟ್ಟದ “ವೃಕ್ಷೋಥಾನ್ ಹೆರಿಟೇಜ್ ರನ್-2025” ಮ್ಯಾರಾಥಾನ ಓಟದಲ್ಲಿ ದೇಶ, ವಿದೇಶಗಳಿಂದ ಮ್ಯಾರಾಥಾನ ಓಟಗಾರರು ಹಾಗೂ ಗಣ್ಯ ಮಾನ್ಯರು ಭಾಗವಹಿಸುವ ಮೂಲಕ ವಿಶೇಷ ಮೆರಗನ್ನು ಹೆಚ್ಚಿಸಿದ್ದಾರೆ. 23,000 ಓಟಗಾರರು ನೋಂದಣಿ ಮಾಡಿ ಭಾಗವಹಿಸುವುದರೊಂದಿಗೆ ವಿಶೇಷವಾದ ದಾಖಲೆ ನಿರ್ಮಾಣವಾಗಿದೆ. ಆರೋಗ್ಯ ಜಾಗೃತಿ, ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ, ವೃಕ್ಷಾ ಕಿಡ್ಸ್ ರನ್, ವಿವಿಧ ಕಲಾತಂಡಗಳ ಪ್ರದರ್ಶನ ಹಾಗೂ ಪರಮಪೂಜ್ಯ ಸಿದ್ದೇಶ್ವರ ಅಪ್ಪಾಜಿಯವರ ಭಾವಚಿತ್ರದ ಪದಕಗಳಿಂದ ಕಾರ್ಯಕ್ರಮ ವೈವಿದ್ಯತೆಯನ್ನು ಮರೆದಿದೆ ಎಂದು ಅವರು ಹೇಳಿದರು.

      ಸಾಮಾಜಿಕ ಅರಣ್ಯ ವಿಭಾಗದಲ್ಲಿ ರಸ್ತೆ ಬದಿ ನೆಡುತೋಪಿನಲ್ಲಿ 17,715 ಸಸಿಗಳನ್ನು, ನಗರ ಹಸರೀಕರಣ ಯೋಜನೆಯಡಿ 34,749 ಸಸಿಗಳನ್ನು, ನರೇಗಾ ಯೋಜನೆಯಡಿ 28,595 ಸಸಿಗಳನ್ನು, ಹಸಿರು ಕರ್ನಾಟಕ ಯೋಜನೆಯಡಿ 2,000 ಸಸಿಗಳನ್ನು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 31,160 ಸಸಿಗಳನ್ನು ಬೆಳೆಸಿ ನಿರ್ವಹಣೆ ಮಾಡಲಾಗುತ್ತಿದೆ. ಪ್ರಾದೇಶಿಕ ಅರಣ್ಯ ವಿಭಾಗದಿಂದ ಜಿಲ್ಲೆಯಲ್ಲಿ 455 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದ್ದು, 2 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಅವರು ಹೇಳಿದರು.

      ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೇಲ್ ಮೆಂಟರ್, ಮಿಷನ್ ವಿದ್ಯಾಪೂರ-ಚೇತನ ಸಂಜೆ ಆನಲೈನ್ ಕ್ಲಾಸ್, ವಸತಿ ನಿಲಯ ವಾಸ್ತವ್ಯ, ಸ್ವಚ್ಛತಾ ಅಭಿಯಾನ, ಆಹಾರ ಪಾರದರ್ಶಕತೆ, ವಾರ್ಡನರ್ ವಿಶೇಷ ದಿನಚರಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬ ವಿನೂತನ ಕಾರ್ಯಕ್ರಮಗಳು ಜಾರಿಯಲ್ಲಿದ್ದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಕ್ರಮವಹಿಸಲಾಗುತ್ತಿದೆ. ವಿಜಯಪುರ ನಗರದಲ್ಲಿ 6 ಕೋಟಿ 50 ಲಕ್ಷ ವೆಚ್ಚದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, 3 ಕೋಟಿ 70 ಲಕ್ಷ ವೆಚ್ಚದಲ್ಲಿ ಪರಿಶಿಷ್ಠ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ 18 ಕೋಟಿ ವೆಚ್ಚದಲ್ಲಿ ನಿಡಗುಂದಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಲೋಕಾರ್ಪಣೆಗೊಂಡಿರುವ್ಯದು ವಿದ್ಯಾರ್ಥಿನಿಯರಿಗೆ ಅತ್ಯುತ್ತಮವಾದ ಶೈಕ್ಷಣಿಕ ವಾತಾವಣವನ್ನು ಸೃಷ್ಠಿಸಲಾಗಿದೆ ಎಂದು ಅವರು ಹೇಳಿದರು.

      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬಬಲೇಶ್ವರ ಪಟ್ಟಣದಲ್ಲಿ 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವು ಲೋಕಾರ್ಪಣೆಯಾಗಿದ್ದು, 125 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಿಜಯಪುರ ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಮೆಡಿಕಲ್ ಮತ್ತು ಎಂಜಿನೀಯರಿಂಗ್ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ 2 ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದ್ದು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

      ವಿಜಯಪುರ ಜಿಲ್ಲೆಯು ಸೈಕ್ಲಿಂಗ್ ತವರೂರೆಂದು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಸಹಕಾರಿಯಾಗಲೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಡಿಯಲ್ಲಿ 9 ಎಕರೆ ವಿಸ್ತೀರ್ಣದಲ್ಲಿ 10 ಕೋಟಿ 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಸೈಕ್ಲಿಂಗ್ ವೆಲೋಡ್ರೋಮ್ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿದೆ. ಇದು ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟ ಮೊದಲನೆಯದಾಗಿರುತ್ತದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಅವರು ಹೇಳಿದರು.

      2025-26 ನೇ ಸಾಲಿನಲ್ಲಿ ಮೈಸೂರಿನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಸೈಕ್ಲಿಂಗ್‍ನಲ್ಲಿ 5 ಚಿನ್ನ, 4 ಬೆಳ್ಳಿ, 5 ಕಂಚಿನ ಪದಕಗಳನ್ನು, ಜುqಲ್Éೂೀ ಕ್ರೀಡೆಯಲ್ಲಿ 28 ಚಿನ್ನ, 15 ಬೆಳ್ಳಿ ಮತ್ತು 28 ಕಂಚಿನ ಪದಕಗಳನ್ನು ಹಾಗೂ ವೇಟ್ ಲಿಫ್ಟಿಂಗ್‍ನಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ ಪದಕವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ತಿಳಿಸಿದರು.

      ವಿಜಯಪುರ ನಗರದ ಗಗನಮಹಲ್ ಕಂದಕದಲ್ಲಿ ಲ್ಯಾಂಡ್‍ಸ್ಕೇಪಿಂಗ್ ಬೋಟಿಂಗ್ ಅಭಿವೃದ್ಧಿ ಪಡಿಸಜಿಲು ಪ್ರವಾಸೋದ್ಯಮ ಇಲಾಖೆಯಿಂದ 150 ಲಕ್ಷ ರೂಪಾಯಿಗಳ ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ. ಆನಂದ ಮಹಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಂಪಿಥೇಟರ್, ಲ್ಯಾಂಡ್ ಸ್ಕೇಪಿಂಗ್ ಮತ್ತು ಫುಡ್ ಕೋರ್ಟ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಅಂದಾಜು ಮೊತ್ತ 500 ಲಕ್ಷ ರೂಪಾಯಿಗಳು ಮಂಜೂರಾಗಿದ್ದು, ಸದರಿ ಕಾಮಗಾರಿ ಕೈಗೊಳ್ಳಲು ವಿಸ್ತ್ರತ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ 6059 ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ ಕಾರ್ಡ ನೋಂದಣಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯಡಿ 4561 ಫಲಾನುಭವಿಗಳಿಗೆ ನೋಂದಣಿ, ಇ-ಶ್ರಮ ಯೋಜನೆಯಡಿ 9539 ನೋಂದಣಿ ಹಾಗೂ ಗಿಗ್ ಕಾರ್ಮಿಕರ ಯೋಜನೆ ಅಡಿಯಲ್ಲಿ 178 ನೋಂದಣಿ ಮಾಡಲಾಗಿದೆ ಎಂದು ಅವರು ಹೇಳಿದರು.

      ವೀಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ 31165 ಅರ್ಹ ವಿಕಲಚೇತನರಿಗೆ ಯುಡಿಐಡಿ ಕಾರ್ಡ, 10 ಲಕ್ಷ 76 ಸಾವಿರ ರೂಪಾಯಿಗಳ ವಿದ್ಯಾರ್ಥಿವೇತನ ವಿತರಿಸಲಾಗಿದೆ. ಶಿಶುಕೇಂದ್ರಿತ ಯೋಜನೆ ಅಡಿಯಲ್ಲಿ ವಿಶೇಷ ಚೇತನರಿಗೆ 79 ಲಕ್ಷ ಅನುದಾನ ಖರ್ಚು ಭರಿಸಲಾಗಿದೆ. ಜಿಲ್ಲೆಯಲ್ಲಿ 22,345 ಹಿರಿಯ ನಾಗರೀಕರಿಗೆ ಮಾಶಾಸನ ಒದಗಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 940 ಕಲಾವಿದರಿಗೆ 1 ಕೋಟಿ 93 ಲಕ್ಷ ಮಾಸಾಶನ ನೀಡಲಾಗಿರುತ್ತದೆ. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯ ಕಾರ್ಯಕ್ರಮಗಳ ಜೊತೆಗೆ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ, ಅಂಬೇಡ್ಕರ್ ಓದು, ಕಲಾತರಬೇತಿ ಮುಂತಾದ ವೈವಿದ್ಯಮಯ ಕಾರ್ಯಕ್ರಮಗಳಿಂದ ಜಿಲ್ಲೆಯ ವಿವಿಧ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.

      ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಮ್ಮ ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ನಮ್ಮಲ್ಲಿ ಪರಸ್ಪರ ತಿಳುವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ ಮತ್ತು ರಚನಾತ್ಮಕ ವಿಮರ್ಶೆ ಅತ್ಯಂತ ಅವಶ್ಯಕವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನೈತಿಕತೆಯ ಮತ್ತು ಮಾನವೀಯತೆಯ ಸಮಾಜವನ್ನು ಕಟ್ಟುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವದರೊಂದಿಗೆ ಭವ್ಯವಾದ ದೇಶವನ್ನು ನಿರ್ಮಿಸಿ ವಿಶ್ವಕ್ಕೆ ಮಾದರಿಯಾಗೋಣ.ಭವ್ಯ ಭಾರತ ಪ್ರಜಾಪ್ರಭುತ್ವದ ಆಧಾರಸ್ತಂಭ ಸಂವಿಧಾನವನ್ನು ಬಲಶಾಲಿಗೊಳಿಸೋಣ. ಸಂವಿಧಾನಕ್ಕೆ ಪ್ರಜೆಗಳೆ ಶಕ್ತಿದಾತರು. ಸಂವಿಧಾನದ ಆಶಯಗಳಂತೆ ನಮ್ಮ ದೇಶವನ್ನು ಮುನ್ನಡೆಸೋಣ ಎಂದು ಅವರು ಹೇಳಿದರು.

      Tags: #indi / vijayapur#Public News#Reputed companies are interested in investing in the district#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಜಿಲ್ಲೆಯಲ್ಲಿ ಹೆಸರಾಂತ ಕಂಪನಿಗಳು ಹೂಡಿಕೆಗೆ ಆಸಕ್ತಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      February 16, 2026
      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      February 16, 2026
      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      February 16, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.