ಮಸ್ಕಿ: ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ಹಾಯ್ದು ಹೋಗಿರುವ 65 ರ ಮುಖ್ಯ ಕಾಲುವೆ ಹತ್ತಿರದ ಸಾನಬಾಳ ಸೇತುವೆ ಕಾಮಗಾರಿ ಕಳೆದ ಇಪ್ಪತ್ತು ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಹಾಲಾಪೂರ ಹಾಗೂ ಸುತ್ತ ಮುತ್ತಲಿನ ಐದಾರು ಹಳ್ಳಿಗಳ ರೈತರು ತಮ್ಮ ಜಮೀನುಗಳಿಗೆ ಹೋಗಲು ತುಂಬಾ ತೊಂದರೆಯಾಗಿದ್ದು, ಮಳೆಗಾಲದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಎಷ್ಟೋ ಸಲ ರಸ್ತೆ ಇಲ್ಲದೆ ಬೆಳೆದ ಬೆಳೆಗಳನ್ನು ನೀರಿನಲ್ಲಿ ಬಿಟ್ಟಿರುವ ಉದಾಹರಣೆ ಇವೆ.
ಹಾಲಾಪೂರ ಗ್ರಾಮದ ಬಹುತೇಕ ಜಮೀನು ಮುಖ್ಯ ಕಾಲುವೆಯ ಮೇಲ್ಬಾಗದಲ್ಲಿ ಇದ್ದು ರೈತರು ಪ್ರತಿವರ್ಷ ಹೊಲ ಗದ್ದೆಗಳಲ್ಲಿ ಬಿತ್ತನೆ, ರಸಗೊಬ್ಬರ, ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವುದು ಮತ್ತು ಬರುವುದು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಎನ್ ಎಸ್ ಬೋಸರಜ್ ಶಾಸಕರ ಅವಧಿಯಿಂದ ಈಗಿನ ಶಾಸಕರವರಗೆ ರೈತರು ಹಲವಾರು ಬಾರಿ ಸೇತುವೆ ದುರಸ್ತಿ ಮಾಡಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ವರೆಗೆ ಆಡಳಿತ ನಡೆಸಿದ ಎಲ್ಲಾ ಜನಪ್ರತಿನಿಧಿಗಳು ಕೇವಲ ಸುಳ್ಳು ಭರವಸೆಯನ್ನು ಕೊಟ್ಟಿದ್ದಾರೆ. ಈಗಿರುವ ಹಾಲಿ ಶಾಸಕರಾದ ಬಸನಗೌಡ ತುರುವಿಹಾಳ ರವರನ್ನ ಸಂಪರ್ಕಿಸಿ ದಾಗ ಇನ್ನೂ ಕೆಲಸ ಆರಂಭಿಕ ಹಂತದಲ್ಲಿದೆ ನೀವು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ನೇರವಾಗ ಬಂದು ಕೇಳಿ ಎಂದು ಕಾಟಾಚಾರ ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಭಾಗಕ್ಕೆ ಬೇಕಾದ ಅತ್ಯಂತ ಅವಶ್ಯವಾದ 65 ರ ಮುಖ್ಯಕಾಲುವೆ ಹತ್ತಿರ ಸಾನಾಬಾಳ ಸೇತುವೆ ಕಾಮಗಾರಿಯ ವಿಳಂಬ ನೀತಿಗೆ ಈ ಭಾಗದ ಜನಪ್ರತಿನಿಧಿಗಳ ಹಿಚ್ಚಾಶಕ್ತಿ ಕೊರತೆಯಿಂದ ಇಷ್ಟು ವರ್ಷ ಹಿನ್ನಡೆಯಾಗಲು ಕಾರಣವಾಗಿದೆ. ಕಾಮಗಾರಿ ಬೇಗನೆ ಆರಂಭವಾಗದಿದ್ದರೆ ಹಾಲಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಶಾಸಕರ ಕಛೇರಿಯಲ್ಲಿ ಧರಣಿ ಮಾಡಲಾಗುವುದು ಎಂದು ಅನೇಕ ರೈತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.