ಸ್ಥಳದಲ್ಲಿಯೇ ₹ 1200 ಮಾಶಾಸನ ಬಿಡುಗಡೆ
ವಿಜಯಪುರ : ವಿಜಯಪುರ ತಾಲ್ಲೂಕಿನ ಗುನ್ನಾಪುರ ಬಸವ ನಗರದ ನಿವಾಸಿಯಾದ ಮಾಣಿಕ ಕಲ್ಲಪ್ಪ ಐಹೊಳೆ ಎಂಬುವರು ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾ ಸುರಕ್ಷಾ ಪಿಂಚಣಿ ಮಂಜೂರಾತಿಗೆ ಫೆ.28 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ, ಸ್ಥಳದಲ್ಲಿಯೇ ವಿಜಯಪುರ ತಹಶೀಲ್ದಾರ ಇವರ ಮೂಲಕ 1200 ರೂ.ಗಳ ಮಾಶಾಸನವನ್ನು ಮಂಜೂರು ಮಾಡಿಸಿ ಆದೇಶ ಪ್ರತಿಯನ್ನು ವಿತರಿಸಲಾಯಿತು.