ಕನ್ನಡದ ಕಟ್ಟಾಳು ನಾರಾಯಣಗೌಡರನ್ನು ಕೂಡಲೇ ಬಿಡುಗಡೆ ಮಾಡಿ : ಕರವೇ ಕೆಂಗನಾಳ
ಇಂಡಿ : ನಮ್ಮ ರಾಜ್ಯದ ನೆಲ, ಜಲ, ಭಾಷೆ ವಿಷಯಗಳಿಗೆ ಕೊಂಚ ಧಕ್ಕೆಯಾದರು ಮೊದಲಿಗೆ ಬರುವವರೆ ನಮ್ಮ ರಾಜ್ಯಾಧ್ಯಕ್ಷರಾದ ಕನ್ನಡ ಕುವರ ಟಿ ಎ ನಾರಾಯಣ – ಗೌಡರು ಅವರ ರಾಜ್ಯದ ಸಂಘಟನೆಗೆ ಬೆಳ್ಳಿ ಮಹೋತ್ಸವ ಕೂಡಾ ಆಗಿದೆ, ಇಂತಹ ವ್ಯಕ್ತಿ ಬಂಧನ ಇಡಿ ರಾಜ್ಯದ ರಾಜಕೀಯ ತಲೆ ತಗ್ಗಿಸುವಂತದ್ದು. ಇದನ್ನು ಕೂಡಲೇ ಸರ್ಕಾರ ಅರಿತು ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕು, ಇಲ್ಲವಾದರೆ ನಾವು ಗ್ರಾಮ ಮಟ್ಟದಲ್ಲಿ ಕರವೇ ವತಿಯಿಂದ ಹೋರಾಟ ಮಾಡಬೇಕಾಗುತ್ತೆ ಎಂದು ಕರವೇ ಅಧ್ಯಕ್ಷ ಶಿವರಾಜ ಕೆಂಗನಾಳ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಮಯದಲ್ಲಿ ಕರವೇ ವಲಯ ಅಧ್ಯಕ್ಷ ವಿನಯ ತಂಗಾ, ಉಪಾಧ್ಯಕ್ಷ ಶಿವುಕುಮಾರ ಸರಸಂಬಿ, ಕಾರ್ಯದರ್ಶಿ ಸಂಜೀವ ಜೇವುರ, ಚಂದು ಕಂಬಾರ ಇದ್ದರು.