ಜಮಖಂಡಿ : ತಳವಾರ ಜಾತಿ ಪ್ರಮಾಣ ಪತ್ರದ ಅರ್ಜಿ ಸ್ವೀಕರಿಸಿಲು ನಿರಾಕರಣೆ ಮಾಡಿದ ಘಟನೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕು ಆಡಳಿತ ಕಛೇರಿಯಲ್ಲಿ ನಡೆದಿದೆ. ಕಳೆದ 2 ವರ್ಷಗಳ ಹಿಂದೆ ತಳವಾರ ಮತ್ತು ಪರಿವಾರ ಜಾತಿಯ ಪದಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಿ ಜಾತಿ ಪ್ರಮಾಣ ಪತ್ರ ಕೋಡಲು ಆದೇಶ ಹೊರಡಿಸಿದೆ. ಆದರೆ ಇಲ್ಲಿಯವರೆಗೆ ಅಧಿಕಾರಿಗಳು ಅರ್ಜಿ ಸ್ವೀಕರಿಸಿದೇ ಸಮಸ್ಯೆಗಳನ್ನೇ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ತಾಲ್ಲೂಕು ಘಟಕದವರು ಆರೋಪಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷ ಈಶ್ವರ ಸನಿದಿ ಮಾತಾನಾಡಿದ ಅವರು, ನಮ್ಮ ಸಮುದಾಯಕ್ಕೆ ಅನ್ಯಾಯ ವಾಗುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ಕೈ ಕೊಡುತ್ತಿದ್ದಾನೆ. ಇಲ್ಲಿಯವರೆಗೆ ಕೆಲವು ಕೆಲವು ಸುತ್ತೊಲೆಗಳಲ್ಲಿ ಸಮಸ್ಯಗಳು ಗೊಂದಲಗಳಿದ್ದವು ಅಂತಾ ಅಧಿಕಾರಿಗಳು ಹೇಳುತ್ತಾನೆ ಸಮಯ ಶ್ರಮ,ಹಣ ಹಾಳು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಹಶಿಲ್ದಾರ ಮಧ್ಯಸ್ಥಿಕೆ ವಹಿಸಿ ಅರ್ಜಿಗಳನ್ನು ಸ್ವೀಕಾರ ಮಾಡುತ್ತೆವೆ ಮತ್ತು ಪರೀಶಿಲನೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆವೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಸವರಾಜ, ಕಲ್ಲಪ್ಪ ತಳವಾರ, ಕರೆಪ್ಪ, ಕಾಸು ಬಸರಗಿ, ವಿಠಲ್ಲ ತಳವಾರ, ಬಾಗಪ್ಪ ತಳವಾರ, ದುಂಡೇಶ್ ತಳವಾರ್ ಇನ್ನೂ ಅನೇಕರು ಉಪಸ್ಥಿತರು.