ಬಿಜೆಪಿ ಜಿಲ್ಲಾಧ್ಯಕ್ಷರ ಮರು ನೇಮಕ ಖಂಡನೆ..!
ಇಂಡಿ : ಸಂಕ್ರಮಣದ ಶುಭ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಘಟಕ ಜಿಲ್ಲಾಧ್ಯಕ್ಷರ ನೇಮಕ ಮಾಡಿದೆ, ಅದರಂತೆ ವಿಜಯಪುರ ಜಿಲ್ಲೆಗೆ ಮೊದಲಿನ ಅಧ್ಯಕ್ಷರನ್ನೆ ಮರು ನೇಮಕ ಮಾಡಿ ಆದೇಶ ಮಾಡಿದೆ. ಈ ಹಿನ್ನಲೆಯಲ್ಲಿ ಪಂಚಮಸಾಲಿ ಸಮುದಾಯ ರಾಜ್ಯ ಬಿಜೆಪಿ ಘಟಕದ ಮೇಲೆ ಆಕ್ರೋಶ ಗೊಂಡಿದೆ, ಮೊದಲಿನಿಂದಲೂ ಬಿಜೆಪಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಲೆ ಬಂದಿದೆ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ಪಂಚಮಸಾಲಿ ಸಮುದಾಯ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿ ಬಿಜೆಪಿಗೆ ಹೆಚ್ಚಿನ ಮತಗಳು ಬರುವ ಹಾಗೆ ನಿರಂತರ ಕೆಲಸ ಮಾಡಿದೆ, ಅದರ ಭಾಗವಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ವಕ್ತಾರರು ಆಗಿರುವ ನಮ್ಮ ಸಮಾಜದ ಮುಖಂಡ ಡಾ//ಸುರೇಶಗೌಡ ಬಿರಾದಾರ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕಿತ್ತು ಅವರು ಪಕ್ಷದ ನಿಷ್ಠಾವಂತ ಪದಾಧಿಕಾರಿಗಳು, ಸಂಘಟನೆ ಚತುರರು ಆಗಿದ್ದವರು, ಅಂತಹ ಹೊಸ ಮುಖಂಡರಿಗೆ ಅವಕಾಶಗಳು ಕೊಡಬೇಕು ಎಂಬುದು ನಮ್ಮ ಸಮಾಜದ ಕೂಗು ಇದನ್ನು ಪರಿಗಣಿಸದೆ ಮುದ್ದೇಬಿಹಾಳ ಮಂಡಲಕ್ಕೆ ಎರಡು ಎರಡು ದೊಡ್ಡ ಸ್ಥಾನಮಾನ ಕೊಟ್ಟರೆ ಉಳಿದ ಮಂಡಲದ ನಿಷ್ಠಾವಂತ ಕಾರ್ಯಕರ್ತರ ಪಾಡೆನು? ಎಂದು ರಾಜ್ಯ ಬಿಜೆಪಿ ಘಟಕದ ಮೇಲೆ ತಮ್ಮ ಆಕ್ರೋಶ ಮಾತನ್ನು ಲಿಂಗಾಯತ ಪಂಚಮಸಾಲಿ ಯುವ ಘಟಕ ಜಿಲ್ಲಾ ಉಪಾಧ್ಯಕ್ಷ ಶಿವರಾಜ ಕೆಂಗನಾಳ ಪತ್ರಿಕೆ ಪ್ರಕಟಣೆ ಮೂಲಕ ಜಿಲ್ಲಾಧ್ಯಕ್ಷರ ಮರು ನೇಮಕವನ್ನು ಖಂಡಿಸಿದ್ದಾರೆ.