ರಾಣಿ ಚನ್ನಮ್ಮಳ ಜೀವನವು ಧೈರ್ಯ, ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ
ಇಂಡಿ: ಕಿತ್ತೂರು ರಾಣಿ ಚನ್ನಮ್ಮಳ ಜೀವನವು ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ಅವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಕಿತ್ತೂರು ರಾಣಿ ಚನ್ನಮ್ಮನವರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ನಾಡನ್ನಾಳಿದ, ತನ್ನ ಚಿಕ್ಕ ಸಂಸ್ಥಾನವನ್ನು ಬ್ರಿಟಿಷರಿಗೆ ಬಿಟ್ಟುಕೊಡದೆ ಸೆಣಸಿದ ಧೀಮಂತ ಮಹಿಳೆ ರಾಣಿಚನ್ನಮ್ಮಳು ಇಂದಿನ ಯುವ ಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾಳೆ. ಅವರ ಸಾಹಸ ಮತ್ತು ನಾಯಕತ್ವವು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಎಂದರೆ ಧೈರ್ಯ, ಸಾಹಸ, ಸ್ವಾಭಿಮಾನದ ಸಂಕೇತ, ದೇಶಪ್ರೇಮದ ಪ್ರತೀಕ . ಸ್ವಾಭಿಮಾನಿ ಸೈನಿಕರನ್ನು ಒಗ್ಗೂಡಿಸಿ ಸ್ವತಂತ್ರ ರಾಜ್ಯಕ್ಕಾಗಿ ಛಲಬಿಡದೆ ಹೋರಾಡಿದ ವೀರವನಿತೆ ಅವಳಾಗಿದ್ದಾಳೆ ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎಸ್ ಎಸ್ ಅರಬ ಹಾಗೂ ಶಿಕ್ಷಕರಾದ ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಜೆ ಎಂ ಪತಂಗಿ, ಸಾವಿತ್ರಿ ಸಂಗಮದ, ಎಸ್ ಡಿ ಬಿರಾದಾರ, ಎಫ್ ಎ ಹೊರ್ತಿ, ಎಸ್ ಬಿ ಕುಲಕರ್ಣಿ, ಶ್ರದ್ಧಾ ಬಂಕಲಗಾ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ,ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಅತಿಥಿ ಶಿಕ್ಷಕರಾದ ಬಿ ಎಸ್ ಹೊಸೂರ, ಪ್ರಜ್ವಲ್ ಕುಲಕರ್ಣಿ, ಅಲ್ಫಿಯಾ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.