ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ B. A ಕರೀಂ ಸಾಬ್ ರಂಜಾನ್ ಹಬ್ಬ ಮುಸ್ಲಿಮರ ಪವಿತ್ರ ಹಬ್ಬ. ರಂಜಾನ್ ತಿಂಗಳಲ್ಲಿ ಒಂದು ತಿಂಗಳು ಮುಸ್ಲಿಂ ಸಹೋದರರು ಉಪವಾಸವನ್ನ ಮಾಡಿ ತಿಂಗಳ ನಂತರ ಹಬ್ಬವನ್ನ ಆಚರಣೆ ಮಾಡುತ್ತಾರೆ. ಎಲ್ಲಾ ಜನಾಂಗದವರು ಶಾಂತಿ ಸೌಹಾರ್ದತೆಯನ್ನ ಕಾಪಾಡಬೇಕು ಎಂದರು.
ನಂತರ ಮಾತನಾಡಿದ ಕವಿತಾಳ PSI ಗಂಗಪ್ಪ ಬುರ್ಲಿ ಸಮಾಜದಲ್ಲಿ ಎಲ್ಲರೂ ಶಾಂತಿಯಿಂದ ಹನ್ನವನ್ನು ಆಚರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಹಿತಕರ ಪೋಸ್ಟಗಳು ಕಂಡು ಬಂದರೆ ನಮಗೆ ಮಾಹಿತಿಯನ್ನ ತಿಳಿಸಬೇಕು. ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ಮಾಡಲಾಗುವುದು ಎಂದು ಸಾರ್ವಜನಿಕರನ್ನ ಕುರಿತು ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ರಾಜ್ ಮಹಮದ್, ವೀರೇಶ್, ಚನ್ನಬಸವ, ಸೇರಿದಂತೆ ಗ್ರಾಮಪಂಚಯತ್ ಮಾಜಿ ಸದಸ್ಯರಾದ ಸೈಯದ್ ಆಜಂ ಸಾಬ್, ಖಾಜಿ ಸಾಬ್, ರುಕ್ಮಉದ್ದಿನ್, ಶಿವರಾಜ ಉಪಸ್ಥಿತರಿದ್ದರು.