ಅಫಜಲಪುರ: ಭಾವೈಕ್ಯತೆಯ ಸಂಕೇತವಾಗಿರುವ ರಂಜಾನ್ ಹಬ್ಬವು ಮುಸ್ಲಿಂ ಬಂಧುಗಳ ಧಾರ್ಮಿಕ ಆಚರಣೆಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಅವರು ಪಟ್ಟಣದ ಮಣೂರ ಫಂಕ್ಷನ್ ಹಾಲ್ ನಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ ಕೂಟ ಏರ್ಪಡಿಸಿ ಮಾತನಾಡಿ ರಂಜಾನ್ ತಿಂಗಳು ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾಗಿದ್ದು ಅಲ್ಲಾಹುನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೆದಾರ ಮಾತನಾಡಿ ರಂಜಾನ್ ಹಬ್ಬವು ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದು ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಶಾಂತಿ ಸದಾಕಾಲ ನೆಲಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಾಶಾ ಮಣೂರ, ಫಿರೋಜ ಜಾಗಿರದಾರ, ಮಂಜೂರ ಅಹ್ಮದ ಅಗರಖೇಡ, ನಬಿಲಾಲ ಮಾಶಾಳಕರ, ರಫತ ಜಾಗಿರದಾರ ಅನ್ವರ ಶೇಖ್, ತನವೀರ ಮಣೂರ, ಜಾಫರ ಪಟೇಲ, ರಹಮತ ಜಾಗಿರದಾರ, ಹಫೀಜ ಮಣೂರ, ಮುನೀರ ಪಟೇಲ, ಜಹಾಂಗಿರ ಮಣೂರ, ಅಲಿಸಾಬ ಚೌದ್ರಿ ಮಳೇಂದ್ರ ಡಾಂಗೆ, ರಮೇಶ ಬಾಕೆ ರಾಜು ಜಿಡ್ಡಗಿ,ಅವ್ವಣ್ಣ ಮ್ಯಾಕೇರಿ, ದತ್ತಾತ್ರೇಯ ದೇವರನಾದಗಿ, ಶಂಕರ ಮ್ಯಾಕೇರಿ, ವಿಶ್ವನಾಥ ರೇವೂರ, ಮಲ್ಲಿಕಾರ್ಜುನ ನಿಂಗದಳ್ಳಿ, ಪಂಚಪ್ಪ ದೇವಣಿ, ಸಿದ್ದು ದಿಕ್ಸಂಗಿ, ಶ್ರೀಶೈಲ ಬಳೂರ್ಗಿ, ಪ್ರಕಾಶ ಬನ್ನೆಟ್ಟಿ, ದಾನು ಪತಾಟೆ ಸೇರಿದಂತೆ ಇತರರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.