ರಾಯಚೂರು: ಮಹಿಳೆಯರ ಕುರಿತು ಅವಾಚ್ಯ ಶಬ್ದ ಬಳಸಿ ನಿಂದನೆ ಮಾಡಿ ಮಹಿಳೆಯರಿಗೆ ಅವಮಾನ ಮಾಡಿದ ಶಾಸಕ ರಮೇಶಕುಮಾರ ಅವರನ್ನು ಕೂಡಲೇ ಸದನದಿಂದ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡುವಾಗ ಶಾಸಕ ರಮೇಶ ಅವರು ಸಭಾಧ್ಯಕ್ಷರ ಸಮ್ಮುಖದಲ್ಲಿ ಅವಾಚ್ಯ, ನಿಂದನಾತ್ಮಕ ಪದ ಬಳಕೆ ಮಾಡಿ ಅಗೌರವ ನೀಡಿದ್ದಾರೆ. ಜನಪ್ರತಿನಿಧಿಯಾಗಿ, ಸಭಾಪತಿಯಾಗಿ ಕಾರ್ಯನಿರ್ವಹಿಸಿದ ಅನುಭವ ಉಳ್ಳ ರಮೇಶ ಕುಮಾರ ಅಗೌರವ ತೋರಿದ್ದಾರೆ ಎಂದರು.
ಮಹಿಳೆಯರ ಬಗ್ಗೆ ಇರುವ ಅವರ ಕಾಳಜಿ, ಮಾನಸಿಕತೆಯನ್ನು ತೋರಿಸುತ್ತದೆ. ಇಂತಹ ಜನಪ್ರತಿನಿಧಿಯನ್ನು ಸಚಿವಾಲಯದಿಂದ ತಕ್ಷಣವೇ ಉಚ್ಚಾಟನೆಗೊಳಿಸಬೇಕು ಎಂದು ಆಗ್ರಹಿಸಿದರು.