ರಮೇಶ್ ಜಿಗಜಿಣಿಗಿ ಅವರ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ : ರಾಮಸಿಂಗ್ ಕನ್ನೊಳ್ಳಿ.
ರಮೇಶ್ ಜಿಗಜಿಣಿಗಿ ಅವರ ಗೆಲುವು ಖಚಿತ : ರಾಮಸಿಂಗ್ ಕನ್ನೊಳ್ಳಿ.
ಇಂಡಿ : ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿಪರ ಕೆಲಸ ಮಾಡುವ ಮೂಲಕ ಜನಪರ ಆಡಳಿತ ನೀಡಿದ ಸಂಸದ ರಮೇಶ್ ಜಿಗಜಿಣಿಗಿ ಅವರು ಜನರ ವಿಸ್ವಾಸಗಳಿಸಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಬಿಜೆಪಿ ಯುವ ಮುಖಂಡ ರಾಮಸಿಂಗ್ ಕನ್ನೊಳ್ಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024 ರ ಲೋಕಸಭಾ ಚುನಾವಣೆ ಮೀಸಲು ವಿಜಯಪುರ ಕ್ಷೇತ್ರದಲ್ಲಿ 4 ನೇ ಬಾರಿ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು, ಕೂಡಗಿಯಲ್ಲಿ ಎನ್ ಟಿ ಪಿ ಸಿ ಸ್ಥಾಪನೆ, ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಅಂತಹ ಬೃಹತ್ ಪ್ರಮಾಣ ಜನಮಾನಸದಲ್ಲಿ ಉಳಿಯುವ ಅಭಿವೃದ್ಧಿ ಕೆಲಸ ಕಾರ್ಯಗಳು ನರೇಂದ್ರ ಮೋದಿ ಸರಕಾರದಲ್ಲಿ ನೇತೃತ್ವ ಅತೀ ಹೆಚ್ಚಿನ ಅನುದಾನ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿ ಹೊಸಪಥದಲ್ಲಿ ತಂದಿದ್ದಾರೆ. ಹೀಗಾಗಿ ಈ ಬಾರಿ ನಮ್ಮ ಅಭ್ಯರ್ಥಿ ರಮೇಶ್ ಜಿಗಜಿಣಿಗಿ ಗೆಲ್ಲುವುದು ಪಕ್ಕಾ ಎಂದು ವ್ಯಕ್ತಪಡಿಸಿದರು.