ಅಕ್ರಮ ನಾಡ ಬಂದೂಕು ತಯಾರು ಮಾಡುತ್ತಿದ್ದ ವ್ಯಕ್ತಿಯನ್ನು ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿ
ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರಾಪಾತಿ ಗ್ರಾಮದ ಮಹಿಮೈನಾಥನ್ ಅಲಿಯಾಸ್ ಮೀಸೆರಾಜು ಬಂದಿತ ವ್ಯಕ್ತಿಯಾಗಿದ್ದು ,ಆತನಿಂದ ಜಮೀನಿನಲ್ಲಿ ಅಡಗಿಸಿಟ್ಟಿದ್ದ ಅಕ್ರಮ ಎರಡು ನಾಡ ಬಂದೂಕು ಹಾಗೂ ಒಂಟಿ ನಳ್ಳಿಕೆ ಬಂದೂಕು ಸೇರಿದಂತೆ ಅದಕ್ಕೆ ಬೇಕಾದ ಮದ್ದು ಗುಂಡು ಪರಿಕರಗಳನ್ನು ಪೊಲೀಸರು ವಶಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿವರ : ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ರವರ ಅಪರಾಧ ವಿಭಾಗದ ಸಿಬ್ಬಂದಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ 7.45ರಲ್ಲಿ ಮಾರ್ಟಳ್ಳಿ ಗ್ರಾಪ ವ್ಯಾಪ್ತಿಯ ಕಿರಾಪತಿ ಗ್ರಾಮದ ಮಹಿಮೈನಾಥನ್ ತನ್ನ ತೋಟದ ಮನೆಯ ಜಮೀನಿನ ಹುಲ್ಲಿನ ಮೇರೆಯಲ್ಲಿ ಎರಡು ಅಕ್ರಮ ನಾಡ ಬಂದೂಕು ಅಡಗಿಸಿಟ್ಟಿದ್ದು, ಜೊತೆಗೆ ಈತನು ತಾನೇ ಅಕ್ರಮ ನಾಡ ಬಂದೂಕು ತಯಾರು ಮಾಡುತ್ತಿದ್ದು ಸ್ಥಳದಲ್ಲಿಯೇ ಅದಕ್ಕೆ ಬೇಕಾದ ಪರಿಕರಗಳಾದ ಮದ್ದು ಗುಂಡು ಗನ್ ಪೌಡರ್ ಬಾಚಿ ಉಳಿ ಸೇರಿದಂತೆ ಇನ್ನಿತರ ಪರಿಕರಗಳು ಸ್ಥಳದಲ್ಲಿಯೇ ದೊರೆತಿದೆ ಈ ಬಗ್ಗೆ ವ್ಯಕ್ತಿಯನ್ನು ರಾಮಾಪುರ ಪಿಎಸ್ಐ ಈಶ್ವರ್ ಆತನು ದಾಸ್ತಾನು ಮಾಡಿದ್ದ ಪರಿಕರಗಳನ್ನು ಎರಡು ನಾಡ ಬಂದೂಕು ಸಮೇತ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಹಳೆಯ ದ್ವೇಷಕ್ಕೆ ಬಂದೂಕು ತಯಾರಿ : ಕಿರಾಪತಿ ಗ್ರಾಮದ ಅಕ್ರಮ ದಾಸ್ತಾನು ಇಟ್ಟಿದ್ದ ಬಂದೂಕುಗಳನ್ನು ತಾನೇ ತಯಾರು ಮಾಡಿ ಈ ಹಿಂದೆ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾಗಿ ಕಾಲು ಮುರಿದುಕೊಂಡಿದ್ದ ಈತನು ಮತ್ತೆ ದಾಳಿ ಮಾಡಬಹುದು ಎಂಬುದನ್ನು ಅರಿತು ಅಕ್ರಮವಾಗಿ ನಾಡ ಬಂದು ತಯಾರು ಮಾಡಿ ತನ್ನ ಜಮೀನಿನಲ್ಲಿ ಇಟ್ಟು ಕೊಂಡಿದ್ದ ಎಂದು ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಾಗೂ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ರವರ ಮಾರ್ಗದರ್ಶನದಲ್ಲಿ ಹನೂರು ಇನ್ಸ್ಪೆಕ್ಟರ್ ಶಶಿಕುಮಾರ್ ಸೂಚನೆಯ ಮೇರೆಗೆ ಪಿ ಎಸ್ ಐ ಈಶ್ವರ್ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂದಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.