ಮನೆ ಮನೆಗೆ ತೆರಳಿ ಅಯೋದ್ಯ ಮಂತ್ರಾಕ್ಷತೆ ವಿತರಿಸಿದ ರಾಮಭಕ್ತರು
ಇಂಡಿ : ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ
ಉದ್ಘಾಟನೆಗೊಳ್ಳುತ್ತಿರುವ ಶ್ರೀರಾಮಮಂದಿರ
ಪ್ರತಿಷ್ಠಾಪನೆ ಹಿಂದು ಪರ ಸಂಘಟನೆ ಕಾರ್ಯಕರ್ತರು ಮಂಗಳವಾರ ಮನೆ ಮನೆಗೆ ತೆರಳಿ ಅಯೋದ್ಯ ಮಂತ್ರಾಕ್ಷತೆ ವಿತರಿಸಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದಾದ್ಯಂತ 5ಸಾವಿರ ಶ್ರೀಗಳು ಭಾಗವಹಿಸಲಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಗೊಬ್ಬ ಶ್ರೀಗಳಿಗೆ ಜ. 22ರಂದು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಟ್ರಸ್ಟ್ ಪರ ವಿಶ್ವ ಹಿಂದು ಪರಿಷತ್ತಿನ ಪ್ರಕಾಶ್ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದರು.
ಈ ಸಂದರ್ಭದಲ್ಲಿ ನೇತಾಜಿ ಪವಾರ, ಭಗತಸಿಂಗ್ ಹಲವಾಯಿ, ಪ್ರವೀಣ ಮಠ, ಮಲ್ಲಿಕಾರ್ಜುನ ಹಾವಿನಾಳಮಠ, ಸೋಮು ನಿಂಬರಗಿಮಠ, ರಾಮಚಂದ್ರ ಕನ್ನೊಳ್ಳಿ ಸೇರಿದಂತೆಅನೇಕ ಹಿಂದೂ ಕಾರ್ಯಕರ್ತರು ಇದ್ದರು.
ಇಂಡಿ: ಶ್ರೀರಾಮಮಂದಿರ ಪ್ರತಿಷ್ಠಾನೆ ಹಿಂದು ಪರ
ಸಂಘಟನೆ ಕಾರ್ಯಕರ್ತರು ಮನೆ ಮನೆಗೆ ತೆರಳಿ
ಅಯೋದ್ಯ ಮಂತ್ರಾಕ್ಷತೆ ವಿತರಿಸಿದರು.