ರಾಯಚೂರು : ಪ್ರಸ್ತುತ 2022-2023 ಸಾಲಿನ ರಾಜ್ಯದ ಬಜೆಟ್ ನಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನ ಒದಗಿಸುವಂತೆ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಯರಗೇರಾ ಗ್ರಾಮದ ಹತ್ತಿರ ಯಾದಗಿರಿ-ರಾಯಚೂರು ಜಿಲ್ಲೆಗಳನ್ನೊಳಗೊಂಡ ನೂತನ ರಾಯಚೂರು ವಿಶ್ವವಿದ್ಯಾಲಯ 2021-2022 ಕಾರ್ಯಾರಂಭ ಮಾಡಿದ್ದು, ಪ್ರವೇಶಾತಿ ಪ್ರಕ್ರಿಯೆ ಸಹ ಆರಂಭವಾಗಿದೆ. ಆದರೆ ವಿಶ್ವವಿದ್ಯಾಲಯ ಮೂಲಸೌಲಭ್ಯ ಹಾಗೂ ಬೋಧಕ, ಬೋಧಕತೆರೆ ಸಿಬ್ಬಂದಿಗಳ ನೇಮಕವಾಗಿಲ್ಲ. ಹೀಗಾಗಿ ಬರುವ 2022-2023 ಬಜೆಟ್‌ನಲ್ಲಿ 100 ಕೋಟಿ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ಸಾಸಕ ದದ್ದಲ್ ಮನವಿ ಮಾಡಿದರು. ಯಾದಗಿರಿ – ರಾಯಚೂರು ಜಿಲ್ಲೆಗಳು ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷಿ ಒಳಪಡುತ್ತಿದೆ. ಈ ಭಾಗದ ಶೈಕ್ಷಣಿಕ ಪ್ರಗತಿಗೆ, ಉನ್ನತ ವಿದ್ಯಾಭ್ಯಾಸ ದೃಷ್ಟಿಯಿಂದ ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿ, ಒತ್ತಡ ಹೇರಿದರು.
ಈ ವೇಳೆ ಮುಖಂಡರಾದ ಈಶ್ವರ ಖಂಡ್ರೆ, ಎಂಎಲ್‌ಸಿ ಶರಣೇಗೌಡ ಬಯ್ಯಾಪುರ ಸೇರಿದಂತೆ ಅನೇಕ ಮುಖಂಡರು ಇದ್ದರು.