ರಾಯಚೂರು : ವಾರಾಂತ್ಯದ ಕರ್ಫ್ಯೂ ಜಿಲ್ಲಾಡಳಿತ ಹಿಂಪಡೆದ ಹಿನ್ನಲೆಯಲ್ಲಿ ಕುರಿಸಂತೆ ಭರ್ಜರಿಯಾಗಿ ನಡೆದಿದೆ. ನಗರದ ಹೊರವಲಯದ ಕಾಟನ್ ಮಾರ್ಕೆಟ್ ಬಳಿ ಕುರಿಸಂತೆ ನಡೆಯಿತು. ಸಂತೆಯಲ್ಲಿ ಕುರಿಗಳು ಮಾರಾಟಗಾರರು, ಕೊಳ್ಳುವವರು, ವ್ಯಾಪಾರಸ್ಥರು ಸಂತೆಗೆ ಆಗಮಿಸಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು.
ಪ್ರತಿ ಶನಿವಾರದಂದು ಕುರಿಸಂತೆ ನಡೆಯುತ್ತದೆ. ಆದರೆ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಿಂದಾಗಿ ಕುರಿಸಂತೆ ನಡೆಯುತ್ತಿರಲಿಲ್ಲ. ಇಂದಿನಿಂದ ವಾರಾಂತ್ಯ ಕರ್ಫ್ಯೂಗೊಳಿಸಿರುವುದ್ದರಿಂದ ಪ್ರತಿ ವಾರದಂತೆ ನಡೆಯುವ ಕುರಿಸಂತೆ ನಡೆಯುತ್ತಿತ್ತು.
ಆದರೆ ಸಂತೆಯಲ್ಲಿ ಪಾಲನೆಯಾಗಬೇಕಾದ ಕೋವಿಡ್-19 ನಿಯಮಗಳನ್ನು ಕೆಲವರು ಪಾಲಿಸಿದರೆ, ಕೆಲವರು ನಿಯಮಗಳನ್ನು ಗಾಳಿ ತೊರಿದರು, ಮಾಸ್ಕ್ ಧರಿಸದೆ ಇರುವುದು, ಪರಸ್ಪರ ಅಂತರ ಕಾಯ್ದುಕೊಳ್ಳದೆ ಇರುವುದು, ಸ್ಯಾನಿಟೈಜರ್ ಬಳಕೆ ಮಾಡದೆ ಇರುವುದು ಕಂಡು ಬಂತು. ಕುರಿಸಂತೆ ನಡೆಯುತ್ತದೆ ಎನ್ನುವ ಮಾಹಿತಿ ಇದ್ದರೂ, ಜವಾಬ್ದಾರಿಯುತ್ತ ಅಧಿಕಾರಿಗಳು ಸಂತೆಗೆ ಆಗಮಿಸಿ ಜಾಗೃತಿ ಹಾಗೂ ನಿಯಮಗಳನ್ನ ಪಾಲಿಸುವುದಕ್ಕೆ ಸೂಚನೆ ನೀಡುವುದು ಸಹ ಕಂಡು ಬರಲಿಲ್ಲ. ಕುರಿಸಂತೆ ಪುನಾರಂಭ ಆಗಿರುವುದ್ದಕ್ಕೆ ಕುರಿ ಮಾರಾಟಗಾರರು ಸಂತಸ ತರಿಸಿದ್ದು, ವಾರಾಂತ್ಯ ನಿಯಮ ರದ್ದುಗೊಳಿಸಿರುವುದಕ್ಕೆ ಅನುಕೂಲವಾಗಿದೆ ಎನ್ನುತ್ತಿದೆ. ನಿಯಮಗಳನ್ನ ಪಾಲಿಸುವುದಾಗಿ ಎನ್ನುತ್ತಾರೆ ಕುರಿ ವ್ಯಾಪಾರಿಗಳು.