ಹುಚ್ಚನಾಯಿ ಕಡಿತ; ಜನರಲ್ಲಿ ಆತಂಕ
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದಲ್ಲಿ ಹುಚ್ಚನಾಯಿ ಕಚ್ಚಿದ ಪರಿಣಾಮ ಹಲವರಿಗೆ ಗಾಯಗೊಳಿಸಿದ ಘಟನೆ ನಡೆದಿದೆ.
ಹೊಲದಲ್ಲಿ ಕೆಲಸ ಮಾಡುವಾಗ ಆರು ಜನರಿಗೆ, ಎರಡು ಆಡು ,ಎರಡು ನಾಯಿ ,ಎರಡು ಕೋಳಿ ಕಚ್ಚಿ ಗಾಯಗೊಳಿಸಿದೆ. ಐದು ಜನರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಇಡೀ ಗ್ರಾಮಸ್ಥರು ಬೆಚ್ಚಿ ಬೀಳುವಂತೆ ಘಟನೆ ನಡೆದಿದೆ. ಹುಚ್ಚುನಾಯಿ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ : ಬಸವರಾಜ ಕುಂಬಾರ , ಮುದ್ದೇಬಿಹಾಳ