ರಾಯಚೂರು: ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪುಷ್ಪ ಚಿತ್ರ ಡಿಸೆಂಬರ್ 17ರಂದು ಬಿಡುಗಡೆಯಾಗಿದೆ. ತೆಲುಗು ಮಾತ್ರವಲ್ಲದೆ ಕನ್ನಡದಲ್ಲೂ ಚಿತ್ರ ತೆರೆಕಂಡಿದೆ . ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಕ್ಯೂಟ್ ಆಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ . ರಕ್ತಚಂದನ ಕಳ್ಳ ಸಾಗಾಣಿಕೆಯ ಕಥಾಹಂದರ ಹೊಂದಿರುವ ಪುಷ್ಪ ಚಿತ್ರಕ್ಕೆ ತಕ್ಕಮಟ್ಟಿಗೆ ಮೆಚ್ಚುಗೆ ವ್ಯಕ್ತವಾಗಿದೆ . ಈ ನಡುವೆ ರಾಯಚೂರಿನಲ್ಲಿ ಅಲ್ಲು ಅರ್ಜುನ್ ಫ್ಯಾನ್ಸ್ ಅಭಿಮಾನ ಕಂಡು ಥಿಯೇಟರ್ಗೆ ಬಂದ ಜನರು ಶಾಕ್ ಆಗಿದ್ದಾರೆ . ಪುಷ್ಪ ಚಿತ್ರದ ನಿನ್ನೆ ತೆರೆಕಂಡಿದ್ದು ಅಲ್ಲು ಅರ್ಜುನ್ ಅಭಿಮಾನಿಗಳು ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದ ಮುಂದೆ ದೊಡ್ಡದಾಗಿ ಕಟೌಟ್ ಮಾಡಿ ಹಾಕಿದ್ದಾರೆ . ಇದಕ್ಕೆ ಅಷ್ಟೇ ಉದ್ದದ ನಿಂಬೆ ಹಣ್ಣಿನ ಹಾರವನ್ನು ಹಾಕಿದ್ದಾರೆ . ಅಷ್ಟೇ ಆಗಿದ್ದರೆ ಜನ ಶಾಕ್ ಆಗುತ್ತಿರಲಿಲ್ಲ . ಆದರೆ ಹಾರದ ತುದಿಗೆ ಟಗರಿನ ತಲೆ ಪೋಣಿಸಿದ್ದಾರೆ . ಟಗರಿನ ತಲೆ ಕಡಿದು ಲಿಂಬೆ ಹಾರಕ್ಕೆ ಪೋಣಿಸಿದ ಅಲ್ಲು ಅರ್ಜುನ್ ಪ್ಯಾನ್ಸ್ ನ ಹುಚ್ಚು ಅಭಿಮಾನ ಕಂಡು ಜನ ದಂಗಾಗಿದ್ದಾರೆ .
ಪುಷ್ಪ ಸಿನಿಮಾ ನೀರೀಕ್ಷಿತ ಮಟ್ಟದಲ್ಲಿ ವಿಮರ್ಶೆ ಪಡೆಯಲಿಲ್ಲ . ಚಿತ್ರ ನೋಡಿದವರು ಸಮಯ ದೀರ್ಘವಾಯಿತು ಎಂದು ಉದ್ಘರಿಸಿದ್ದಾರೆ . ತಮಿಳುನಾಡಿನಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಪುಷ್ಪಕ್ಕೆ ಪೈರಸಿ ಕಾಟವೂ ತಗುಲಿದೆ . ಇದರಿಂದ ಬಾಕ್ಸ್ಆಫೀಸ್ ಕಲೆಕ್ಷನ್ ಕೂಡ ಕುಸಿದಿದೆ . ಚಿತ್ರ ಬಿಡುಗಡೆಯಾದ ಮೊದಲ ದಿನವೇ 10 ಕೋಟಿ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಪುಷ್ಪ ಚಿತ್ರದ ಮೊದಲ ದಿನದ ಕಲೆಕ್ಷನ್ ಕೇವಲ 4 ಕೋಟಿ ಮಾತ್ರ ಆಗಿತ್ತು .
ಪಕ್ಕಾ ಹಳ್ಳಿ ಹುಡುಗನ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಲುಕ್ಗೆ ಮೆಚ್ಚುಗೆ ವ್ಯಕ್ತವಾಗಿದೆ . ಆದರೆ ಕರ್ನಾಟಕ ಸೇರಿದಂತೆ ತಮಿಳುನಾಡಿನಲ್ಲಿಯೂ ಚಿತ್ರದ ಬಗ್ಗೆ ಅಂದುಕೊಂಡಷ್ಟು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ .