ಇಂಡಿ : ಹಣಕ್ಕಾಗಿ ವೃದ್ಧನ್ನು ಹತ್ಯೆಗೈದು ಓರ್ವ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಮಲ್ಲೇಶಿ ಕಾರ್ಕಳ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಾಳು ಸೈನಸಾಕಳೆ ಹತ್ಯೆಗೈದಿರುವ ಆರೋಪಿ. ಮಲ್ಲೇಶಿನ್ನು ಬಾಳು ಹತ್ಯೆಗೈದು 20 ಸಾವಿರ ನಗದು, ಒಂದು ಮೊಬೈಲ್, ಬೈಕ್ ಕದ್ದುಕೊಂಡು ಪರಾರಿಯಾಗಿದ್ದಾನೆ ಎಂದು ಸಂಗನಬಸವ ಕಾರ್ಕಲ ಕೇಸ್ ದಾಖಲಾಗಿದೆ ಮಾಡಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಆಗಷ್ಟ್ 13ರಂದು ಕೇಸ್ ದಾಖಲಾಗಿದೆ ಎಂದು ನಗರದಲ್ಲಿ ಎಸ್ಪಿ ಕಚೇರಿಯಿಂದ ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.