ಇಂಡಿ : ನಗರದ ಕುಡಿಯುವ ನೀರು ಸರಬರಾಜು ಘಟಕದಲ್ಲಿ ಅವಶ್ಯಕ ಇರುವ ಬ್ಲಿಚಿಂಗ್ ಪೌಡರಲ್ಲಿ 10 ಲಕ್ಷ ರೂಪಾಯಿ ಅವ್ಯವಹಾರ ನಡಿದಿದೆ ಎಂದು ಪುರಸಭೆ ಸದಸ್ಯ ಅನೀಲಗೌಡ ಬಿರಾದರ, ದೇವೇಂದ್ರ ಕುಂಬಾರ ಆರೋಪ ಮಾಡಿದರು.
ನೀರಿನ ಪೌಡರ್ ಟೆಂಡರ್ನಲ್ಲಿ ಪುರಸಭೆ ಮುಖ್ಯ ಅಧಿಕಾರಿ ಗೋಲಮಾಲ್ ಮಾಡಿದ್ದಾರೆ ಎಂದು ನಗರದಲ್ಲಿ ಸುದ್ದಿ ಗೋಷ್ಟಿ ನಡೆಸಿ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವ ವಾಟರ್ಗೆ ಮಿಕ್ಸ್ ಮಾಡುವ ಬ್ಲಿಚಿಂಗ್ ಫೌಡರ್ರಿಗೆ ಟೆಂಡರ್ ನೀಡದೇ ಅಕ್ರಮವಾಗಿ 4 ನೂರು ಚೀಲ ರಾಸಾಯನಿಕಕ್ಕೆ ಫೌಡರ್ ತರಸಿಕೊಂಡಿದ್ದಾರೆ. ಈ ಹಿಂದೆಯೂ ಇದೇ ತರಹದ ಘಟನೆ ನಡೆದಾಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸೇರಿ ಪುರಸಭೆ ಬೀಗ ಜಡಿದು ಪ್ರತಿಭಟನೆ ಮಾಡಿದ್ದೆವು. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ಅಧಿಕಾರಿಗಳು ಬೇಟಿ ಅಕ್ರಮದ ಬಗ್ಗೆ ಅತೀ ಶೀಘ್ರದಲ್ಲೆ ತನಿಖೆ ಮಾಡಿ ಕಾನೂನು ಕ್ರಮ ಜರಗಿಸುತ್ತೆವೆ ಎಂದು ಹೇಳಿದರು. ಆದರೆ ಈ ಹಿಂದಿನ ಆರೋಪ ಮಾಸುವ ಮುನ್ನವೇ ಮತ್ತೇ 4 ನೂರು ಚೀಲ ಬ್ಲೀಚಿಂಗ್ ಪೌಡರ್ ತಂದಿದ್ದಾರೆ. ಈ ಬಗ್ಗೆ ಮುಖ್ಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದರೆ, ದಾಖಲೆ ತೋರಿಸದೇ ಪಲಾಯನ ಮಂತ್ರ ಜಪಿಸುತ್ತಾರೆ. ಈಗಾಗಲೇ ಯೋಜನಾ ಅಧಿಕಾರಿ ಮತ್ತು ಜಿಲ್ಲಾ ಅಧಿಕಾರಿಗಳ ಗಮನಕ್ಕೂ ಇದೆ. ಕೂಡಲೇ ತನಿಖೆ ಮಾಡಬೇಕು ಒಂದು ವೇಳೆ ವಿಳಂಭ ಮಾಡಿದ್ರೆ ಕಾಣದ ಕೈ ಗಳ ಹಸ್ತಕ್ಷೇಪವಿದೆ ಎಂದು ಭಾವಿಸಬೇಕಾಗುತ್ತೆದೆ. ಉಗ್ರವಾದ ಹೋರಾಟಕ್ಕೆ ಪ್ರಚೋದನೆ ನೀಡಿದಂತಾಗುತ್ತೆದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಸ್ಮಾಯಿಲ ಅರಬ, ಬುದ್ದುಗೌಡ ಪಾಟೀಲ, ವಿಜಯಕುಮಾರ ಮುರಮನ, ಸೈಪನ ಪವಾರ್, ಪಿಂಟು ರಾಠೋಡ, ಯಲಪ್ಪಾ ಹದರಿ ಇನ್ನೂ ಅನೇಕ ಪುರಸಭೆ ಸದಸ್ಯರು ಉಪಸ್ಥಿತರಿದ್ದರು