ಇಂಡಿ : ನಿಂಬೆ ನಾಡಿನಲ್ಲಿ ಚುನಾವಣೆಯ ಕಣ ಯಾವತ್ತಿಗೂ ಕುತೂಹಲ,ಕೌತಕ ಮತ್ತು ರೋಚಕ ವಾತಾವರಣದ ಸ್ವರೂಪ ಪಡೆದುಕೊಳ್ಳೊದು ಸಹಜ ಆದರೆ ಈ ಬಾರಿ ವಿಭಿನ್ನ . ಹೌದು ಇದೀಗ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕೈ, ಕಮಲ ಪಕ್ಷದಲ್ಲಿ ನೇರ ಹಣಾಹಣಿಯ ತೀವ್ರ ಪೈಪೋಟಿ ನಡೆದಿದ್ದರೆ ಪ್ರಾದೇಶಿಕ ಮತ್ತು ಪಕ್ಷೇತರ ಅಭ್ಯರ್ಥಿಗಳು ಗದ್ದುಗೆ ಮೇಲೆ ನಾವೇ ಕುಳಿತುಕೊಳ್ಳುತ್ತೆವೆ ಎಂಬ ಉತ್ಸಾಹ ದಲ್ಲಿದ್ದಾರೆ. ಹೌದು ಗುಮ್ಮಟಿ ನಗರಿಯ ಇಂಡಿ ಪಟ್ಟಣದ ಪುರಸಭೆ ಅಧ್ಯಕ್ಷ ಶೈಲಜಾ ಶ್ರೀಶೈಲ ಪುಜಾರಿ ಮತ್ತು ಉಪಾಧ್ಯಕ್ಷ ಇಸ್ಮಾಯಿಲ್ ಅರಬ್ ಒಪ್ಪಂದಂತೆ ರಾಜೀನಾಮೆ ನೀಡಿದ್ದರಿಂದ ತೇರವಾದ ಎರಡೂ ಸ್ಥಾನಗಳಿಗೆ ಲಾಭಿ ಮಾಡಲಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆಗೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗುವ ಮುನ್ನವೇ. ಕಮಲ ಪಕ್ಷದ ನಾಯಕರು, ತಮ್ಮ ಪಕ್ಷದ 10 ಸದಸ್ಯರೊಂದಿಗೆ, ಪಕ್ಷೇತರ 2 ಸದಸ್ಯರನ್ನು ಪ್ರವಾಸಕ್ಕೆ ಕರೆದೊಯಿದಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದವರು ಸ್ಥಳಿಯವಾಗಿ ಇದ್ದುಕೊಂಡೆ ರಣನೀತಿಯ, ತಂತ್ರಿಗಾರಿಕೆ ರೂಪಿಸುತ್ತಿದ್ದಾರೆ.
ಇಂಡಿ ಪುರಸಭೆಯ ಒಟ್ಟು 23 ಸದಸ್ಯರ ಬಲಾಬಲ ಹೊಂದಿದ್ದು, ಅದರಲ್ಲಿ ಬಿಜೆಪಿ 11, ಕಾಂಗ್ರೆಸ್ 8, ಜೆಡಿಎಸ್ 2, ಪಕ್ಷೇತರರು 2 ಸದಸ್ಯರಿದ್ದಾರೆ. ಆದರೆ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಅಂದರೆ, 11 ಸದಸ್ಯರನ್ನು ಗೆಲ್ಲಿಸುವ ಮೂಲಕ ಇಂಡಿ ನಗರದ ಜನರು ಬಿಜೆಪಿ ಪಕ್ಷಕ್ಕೆ ಬಹುಮತ ಸದಸ್ಯರ ಸಂಖ್ಯಾ ಬಲ ನೀಡಿತು. ಆದರೆ ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷದ ಆಂತರಿಕ ಶೀತಲ ಸಮರವೇ ನಡೆಯಿತು. ಆ ಕಾರಣಕ್ಕಾಗಿ ಪಕ್ಷದ ಸದಸ್ಯರೊಬ್ಬರು ಪಕ್ಷದಿಂದ ಪಲಾಯನ ಮಾಡಿ, ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಎರಡನೇ ಬಾರಿಯ ಅಧ್ಯಕ್ಷಗಿರಿಯ ಒಪ್ಪಂದಕ್ಕೆ ಗುರಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸಿಕೊಂಡರು. ಆದರೆ ಈ ಎಲ್ಲಾ ಶೀತಲ ವಾತಾವರಣ ಗಮನಿಸಿದ ಸ್ಥಳಿಯ ಕೈ ಶಾಸಕರು ಚಾಣಕ್ಯ, ಚಾಣಾಕ್ಷ ನೀತಿಯಿಂದ ಬೇರೆ ಪಕ್ಷದ ವ್ಯಕ್ತಿಯನ್ನ ಕಾಂಗ್ರೆಸ್ ಬೆಂಬಲಿತವಾಗಿ ಪುರಸಭೆಯ ಗದ್ದುಗೆ ಮೇಲೆ ಒಪ್ಪಂದಂತೆ ಆಯ್ಕೆ ಮಾಡಿ 15 ತಿಂಗಳ ಕಾಲ ಅಧಿಕಾರದ ಗದ್ದುಗೆ ಮೇಲೆ ಕೂಡಿಸಿದರು. ಒಪ್ಪಂದಂತೆ ಕಾಲಾವಧಿ ಮುಗಿದ ನಂತರ ರಾಜೀನಾಮೆ ನೀಡಿದ್ದ ಸ್ಥಾನಕ್ಕೆ ಜನವರಿ ೨೦ ರಂದು ಚುನಾವಣೆ ನಡೆಸಲು ಆಯೋಗ ಆದೇಶ ಹೊರಡಿಸಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮಿಸಲಾದ ವರ್ಗದ ಅಭ್ಯರ್ಥಿಯೂ ಇಲ್ಲ ಮ್ಯಾಜಿಕ್ ಮಾಡುವ ಬಲ ಇಲ್ಲದಿದ್ದರೂ ರಾಜೀನಾಮೆ ಕೊಡಿಸಿ ಮಾತಿನಂತೆ ಇನ್ನೊಬ್ಬರನ್ನ ಆಯ್ಕೆ ಮಾಡಲು ಹೋರಟಿರುವುದು ಜನರಲ್ಲಿ ಕುತೂಹಲದ ದಿಘ್ಘಭ್ರಮೆ ಮೂಡಿಸಿದೆ.
ಕೈಪಕ್ಷಕ್ಕೆ ಶಕ್ತಿ ಮತ್ತು ದುರ್ಬಲತೆ
ಕೇವಲ 8 ಸದಸ್ಯರ ಬಲ,ಅಧ್ಯಕ್ಷ ಸ್ಥಾನಕ್ಕೆ ಮೀಸಲಾದ ಅಭ್ಯರ್ಥಿ ಇಲ್ಲದ್ದು ನೀರಾಸೆ ಮೂಡಿಸಿದರೆ, ಚಾಣಕ್ಯ, ಚಾಣಾಕ್ಷ ಕೈ ಶಾಸಕರ ಬಲವಿದೆ.
ಕಮಲ ಪಕ್ಷಕ್ಕೆ ಶಕ್ತಿ ಮತ್ತು ದುರ್ಬಲತೆ
10 ಸದಸ್ಯರ ಬಲ,ಅಧ್ಯಕ್ಷ ಸ್ಥಾನಕ್ಕೆ ಮೀಸಲಾದ ವರ್ಗದ ಅಭ್ಯರ್ಥಿಗಳಿದ್ದು,ಸಂಸದ ರಮೇಶ ಜಿಗಜಿಣಗಿ,ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ,ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದರ ಬಿಜೆಪಿ ನಾಯಕರ ದಂಡನ್ನೇ ಹೊಂದಿದೆ.
ಇಂಡಿ ಪುರಸಭೆಗೆ ಕಮಲ ಪಕ್ಷ 11 ಸದಸ್ಯರ ಗೆಲುವಿನ ಬಲ ಕೊಟ್ಟರೂ ಇಲ್ಲಿಯವರೆಗೂ ಗದ್ದುಗೆ ಕದ ತಟ್ಟುವಲ್ಲಿ ವೈಫಲ್ಯ ಕಂಡಿದ್ದಾರೆ. ಆದರೆ ಈ ಬಾರಿ ದೊಡ್ಡ ಪ್ರಮಾಣದ ನಾಯಕರ ಮತ್ತು ಸದಸ್ಯರ ಬಲವಿದ್ದರೂ ಒಂದು ವೇಳೆ ವೈಫಲ್ಯ ಕಂಡರೆ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಮಾಡಿಕೊಟ್ಟರೆ, ಕಾಂಗ್ರೆಸ್ ಪಕ್ಷ ಕೇವಲ 3 ತಿಂಗಳು ಅಧಿಕಾರ ಮಾಡಲು ಸಾಧ್ಯ ಎಂಬ ಬಿಜೆಪಿ ಆಂತರಿಕ ಮಾತಾಗಿದೆ. ಈ ಪುರಸಭೆ ಚುನಾವಣೆ 2023 ರ ವಿಧಾನ ಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತು ಪಿಸುಗುಟ್ಟುತ್ತಿದೆ. ಈ ಬಗ್ಗೆ ಗಮನಿಸಿದ ಕಮಲ ಪಕ್ಷದ ನಾಯಕರು ಸದಸ್ಯರಿಗೆ ವಿಪ್ ಜಾರಿ ಮಾಡುವ ತವಕದಲ್ಲಿದ್ದಾರೆ. ಆದರೆ ಈ ಎಲ್ಲಾ ವ್ಯವಸ್ಥೆ ಮದ್ಯದಲ್ಲಿಯೂ ರಾಜ್ಯದಲ್ಲಿ ಕಮಲ ಪಕ್ಷ ಆಡಳಿತದ ಬಲವಿದ್ದರೆ, ಸ್ಥಳೀಯವಾಗಿ ವಿರುದ್ಧ ಮುಖವಾಗಿ ಕೈ ಪಕ್ಷದ ಆಡಳಿತದ ಬಲವಿದೆ. ಆದರೆ ಸಂಸದರ ಮತ ಕಮಲ ಪಕ್ಷಕ್ಕೆ ಸೇರಿದ್ದರೆ,ಶಾಸಕರ ಮತ ಕೈ ಪಕ್ಷಕ್ಕೆ ಸೇರಿದ್ದಾಗಿದೆ . ಆದರೆ ಶಾಸಕ ಸಂಸದ ಇಬ್ಬರೂ ಮತದಾನ ಮಾಡುತ್ತಾರೋ ಇಲ್ಲೊ ಎಂಬ ದಟ್ಟವಾದ ವಾತಾವರಣ ಜನರಲ್ಲಿ ಕಾಡುತ್ತಿದೆ. ಇಂಡಿ ಪುರಸಭೆ ಚುನಾವಣೆ 2023 ರ ದಿಕ್ಸೂಚಿ ಎಂಬ ಮಾತು ಕೂಡಾ ಹರಿದಾಡುತ್ತಿದೆ. ಕಾದು ನೋಡಬೇಕು ವಿಜಯಲಕ್ಷ್ಮಿ ಯಾರ ಮುಡಿಗೆ.