ಇಂಡಿ : ಇಂಡಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪುರಸಭೆ ಸದಸ್ಯನಿಗೆ ಚುುನಾವಣೆ ಪ್ರಕ್ರಿಯೆಯಲ್ಲಿ ಅವಕಾಶ ನೀಡದ ಕಾಣದ ಕೈಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸರು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ಮಾಡಿದರು. ಇಂಡಿ ಪುರಸಭೆ ಸದಸ್ಯ ಭೀಮನಗೌಡ ಪಾಟೀಲ್ ರನ್ನು ಆಯುಧ ತೋರಿಸಿ ಅಪಹರಣಗೈದು ಕೂಡಿ ಹಾಕಿದ್ದಾರೆ. ಇದರಿಂದ ಇಂದು ನಡೆಯಬೇಕಿದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಗಿಲ್ಲ. ಇದರಿಂದ ಇದೀಗ್ ಇಂಡಿಯಲ್ಲಿ ಬಿಹಾರ ಮಾದರಿಯ ವಾತಾವರಣ ನಿರ್ಮಾಣವಾಗಿದೆ. ಅದಕ್ಕಾಗಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಪಾಟೀಲ್ ಆಗ್ರಹಿಸಿದರು. ಇದೇ ವೇಳೆಯಲ್ಲಿ ಎಸಿ ಮೂಲಕ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗಳು ಬರುವವರೆಗೂ ಮತ್ತು ಕಾನೂನು ಕ್ರಮ ಜರಗಿಸುವ ಈ ಧರಣಿ ಮುಂದುವರೆಯುತ್ತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಲಿಯಾಸ್ ಬೋರಾಮಾಣಿ, ಬೀಮಣ್ಣ ಕೌಲಗಿ, ಮಲ್ಲನಗೌಡ ಪಾಟಿಲ,ಪ್ರಶಾಂತ ಕಾಳೆ,ಹುಚ್ಚಪ್ಪ ತಳವಾರ,ಸತೀಶ ಕುಂಬಾರ, ಧರ್ಮರಾಜ ವಾಲಿಕಾರ, ಅವಿನಾಶ್ ಬಗಲಿ,ಜಾವೀದ ಮೂರಮನ,ಉಮೇಶ ದೇಗಿನಾಳ,ಮಹೇಶ ಹೊನ್ನಬಿಂದಗಿ ಉಪಸ್ಥಿತರು.