ಪುನಿತ ರಾಜಕುಮಾರ ಜನ್ಮ ದಿನ ಆಚರಣೆ
ಇಂಡಿ | ನಗರದ ಬಸ್ ನಿಲ್ದಾಣ ಹತ್ತಿರ ಬಿಇಒ ಕಚೇರಿ ಎದುರುಗಡೆ ಪುನಿತ ರಾಜಕುಮಾರ ಜನ್ಮ ದಿನ ಆಚರಿಸಲಾಯಿತು. ಹಣ್ಣಿನ ವ್ಯಾಪಾರಿಗಳು ಪುನಿತ ರಾಜಕುಮಾರ ಅಭಿಮಾನಿ ಬಳಗ ಮತ್ತು ಡಾ. ರಾಜಕುಮಾರ ಅಭಿಮಾನಿ ಬಳಗದಿಂದ ಪುನಿತ ರಾಜಕುಮಾರ ೫೧ ನೇಯ ಹುಟ್ಟು ಹಬ್ಬ ಆಚರಿಸಲಾಯಿತು.
ಭಗವಂತ ಪೋದ್ದಾರ ಡಾ. ರಾಜಕುಮಾರ ಅಭಿಮಾನಿ ಮಾತನಾಡಿ ಪುನಿತ ರಾಜಕುಮಾರ ಚಲನಚಿತ್ರ ಅಷ್ಟೆ ಅಲ್ಲದೆ ಸಾಮಾಜಿಕ ಕಾರ್ಯಗಳನ್ನು ಸಾಕಷ್ಟು ಮಾಡಿ ಜನಪ್ರಿಯರಾಗಿದ್ದರು. ಅವರ ಗುಣಗಳು ಯುವ ಪೀಳಿಗೆಗೆ ಮಾದರಿ ಎಂದರು.
ಹುಸೇನಿ ಕಟ್ಟಿಮನಿ, ಶಾಂತು ವಾಲಿಕಾರ, ಮುತ್ತುಗೌಡ, ರಾಜು ಪೂಜಾರಿ, ರವಿ ಕಟ್ಟಿಮನಿ, ಬಾಳಪ್ಪ ಗೋಳಸಾರ, ಬಂದೇನಮಾಜ ಮಕಾನದಾರ ಮಾಂತು ಪೂಜಾರಿ ಸಂತೋಷ ಗುಜರೆ ಮತ್ತಿತರಿದ್ದರು.ಜಯಂತಿ ನಂತರ ಹಣ್ಣು ಹಂಪಲ ವಿತರಿಸಿದರು.
ಇಂಡಿಯ ಬಿಇಒ ಕಚೇರಿ ಎದುರು ಪುನಿತ ರಾಜಕುಮಾರ ಹುಟ್ಟು ಹಬ್ಬ ಆಚರಿಸಲಾಯಿತು.




















