ಇಂಡಿ : ಪಂಚನದಿಗಳ ನಾಡು, ಬರದ ಬೀಡು ನಿಂಬೆ ನಾಡಿನ ಇಂಡಿ ಪಟ್ಟಣದಲ್ಲಿ ಜನತಾ ಜಲಧಾರೆ ರಥಯಾತ್ರೆಯನ್ನು ಏಪ್ರಿಲ್ 23ಕ್ಕೆ ಮಧ್ಯಾಹ್ನ 3 ಘಂಟೆಗೆ ವಿವಿಧ ವಾದ್ಯಗಳ ಸಂಗಮದಿಂದ ಅದ್ದೂರಿ ಮೆರವಣಿಗೆ ಮೂಲಕ ರಥೋತ್ಸವ ನೆರೆವೆರಿಸಿಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ ಪಾಟೀಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ರಾಜ್ಯದಲ್ಲಿ ನೀರಾವರಿ ಯೋಜನೆಗಳ ಜಾರಿಗಾಗಿ ಪಕ್ಷವು ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆಯು ಮಾಡಲಾಗುತ್ತಿದ್ದು, ಈ ಅಭಿಯಾನ ಯಶಸ್ಸಿಗೆ ಕಾರ್ಯಕರ್ತರು ಸಹಕರಿಸಬೇಕು ಎಂದು ಹೇಳಿದರು.
ವಿಜಯಪುರ ರಸ್ತೆಯ ಸೇವಲಾಲ ವೃತ್ ದಿಂದ ರಥೋತ್ಸವ ಚಾಲನೆ ನೀಡಿ, ಸ್ಟೇಷನ್ ರಸ್ತೆಯ ಶಿವಾಜಿ ವೃತ್ ದ ವರೆಗೆ ಕುಂಭ ಹೊತ್ತ ಮಹಿಳೆಯರು, ರೈತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಅದ್ದೂರಿಯಾಗಿ ರಥೋತ್ಸವ ಮೆರವಣಿಗಿಗೆ ಸಾಕ್ಷಿಯಾಗುತ್ತಾರೆ ಎಂದು ಹೇಳಿದರು. ನಮ್ಮ ತಾಲ್ಲೂಕಿನಲ್ಲಿ ನೀರಿನ ಬವಣೆ ತಾಪತ್ರೆ ಇಂದಿಗೂ ತಪ್ಪಿಲ್ಲ. ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗಾಗಿ ಸುಮಾರು 42 ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿದ್ದೆವೆ. ಆದರೆ ಸಂಬಂಧಿಸಿದ ಅಧಿಕಾರಿ ವರ್ಗಾಗಲಿ ಅಥವಾ ನಮ್ಮನ್ನ ಆಳುವ ಜನಪ್ರತಿನಿದಿ – ಗಳಾಗಲಿ ಬೇಟಿ ನೀಡುವ ಸೌಜನ್ಯ ಕೂಡಾ ಕಾಣಲಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ ಪಾಟೀಲ್ ಮಾತಾನಾಡಿದ ಅವರು, ಜನತಾ ಜಲಧಾರೆ ಯಾತ್ರೆ ಸುಮಾರು 94 ನದಿಗಳ ನೀರನ್ನು ಸಂಗ್ರಹಿಸಿ 180 ಕ್ಷೇತ್ರಗಳಲ್ಲಿ ಸಂಚರಿಸಿ ರಾಜ್ಯದ ಪವಿತ್ರವಾದಂತ ಜಲವನ್ನು ಹನಿ ನೀರನ್ನು ಕೂಡ ನಾವು ಕುಡಿಯುವದಕ್ಕೆ ಮತ್ತು ವ್ಯವಸಾಯಕ್ಕೆ ಸಮಗ್ರವಾಗಿ ಉಪಯೋಗಿಸುತ್ತೇವೆ ಎಂದು ಆಲೋಚನೆಯಿಂದ ಇವತ್ತು ಜನತಾ ಜಲಧಾರೆ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಇರುವ 94 ನದಿಗಳ ನೀರು ಸಾಕಷ್ಟು ಪೋಲಾಗಿ ಬೇರೆ ನದಿಗಳಿಗೆ ಹೋಗುತ್ತಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಮತ್ತು ಆಶೀರ್ವಾದ ನೀಡಿದರೆ ರಾಜ್ಯದ ಪ್ರತಿಯೊಂದು ಹನಿ ನೀರನ್ನು ಕೂಡ ವ್ಯವಸಾಯಕ್ಕೆ ಮತ್ತು ಕುಡಿಯುವ ನೀರನ್ನು ಸಮಗ್ರವಾದ ಉಪಯೋಗ ಮಾಡುತ್ತೇನೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಹಸಿರು ಕ್ರಂತಿಯಾಗಿ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಯೂಬ್ ನಾಟೀಕಾರ , ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ್, ಮರೆಪ್ಪ ಗಿರಣಿವಡ್ಡರ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರು.