ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್ ಎಚ್ ಗ್ರಾಮದಲ್ಲಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಎಂಇಎಸ್ ಪುಂಡಾಟಿಕೆಯನ್ನು ಸರ್ಕಾರ ಹತ್ತಿಕ್ಕಬೇಕು. ಮಹಾಜನ ಆಯೋಗದ ವರದಿಯ ಪ್ರಕಾರ ಈಗಾಗಲೇ ಸಮಸ್ಯೆ ಇತ್ಯರ್ಥ ಆಗಿದೆ. ಯಾವ ಪ್ರದೇಶ ಕರ್ನಾಟಕಕ್ಕೆ ಸೇರಬೇಕು ಯಾವುದು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಇತ್ಯರ್ಥ ಆಗಿದೆ. ಈಗ ಕ್ಯಾತಿ ತಗೆಯೋದು ರಾಜಕಾರಣಕ್ಕಾಗಿ, ಇದನ್ನೆಲ್ಲಾ ಸರ್ಕಾರ ಹತ್ತಿಕ್ಕಬೇಕು. ಸರ್ಕಾರ ಎಂಇಎಸ್ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇನ್ನು ಪಿಎಸ್ಐ ನೇಮಕಾತಿಯಲ್ಲಿ ಸಚಿವ ಅಶ್ವತ್ ನಾರಾಯಣ ಸಹೋದರ ಸತೀಶ ಕೈವಾಡ ಇದೆ ಎಂಬ ಆರೋಪ ಕೇಳಿಬರುತ್ತಿದೆ. ರಾಜಾಧಾನಿಯಲ್ಲಿ ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪ ಮಾಡಿದ್ದಾರೆ. ಇದರಲ್ಲಿ ಯಾರಾದೇ ಕೈವಾಡ ಇದ್ದರೂ ಅವರು ಕೂಡಲೇ ರಾಜೀನಾಮೆ ಕೊಡಬೇಕು. ನಾನು ಉಗ್ರಪ್ಪ ಅವರ ಜೊತೆ ಮಾತನಾಡಿಲ್ಲ, ಮಾತನಾಡುವೆ. ಅವರ ಬಳಿ ಏನಾದರೂ ದಾಖಲೆ ಇದ್ದರೆ ತೋರಿಸುವಂತೆ ತಿಳಿಸುವೆ ಎಂದರು. ಅಶ್ವಥ್ ನಾರಾಯಣ ಸಹೋದರ ಅದರಲ್ಲಿ ಇನ್ವಾಲ್ವ ಇರುವ ದಾಖಲೆ ಇದ್ದರೆ ತೋರಿಸಲು ಸೂಚಿಸುವೆ. ತಕ್ಷಣ ಅವರು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.