ಲಿಂಗಸೂಗೂರು: ಸಾಮಾಜಿಕ ಹಾಗೂ ಧಾರ್ಮಿಕ ವಿಚಾರದಲ್ಲಿ ಪ್ರಚೋದನೆ ನೀಡುವದು ಹಾಗೂ ಅಪರಾದ ಎಸುಗುವದು ಕಾನೂನು ಪ್ರಕಾರ ಅಪರಾದವಾಗಿರುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಮುದಗಲ್ ಪಿಎಸ್ಐ. ಪ್ರಕಾಶ ರೆಡ್ಡಿ ಡಂಬಳ ಹೆಳಿದರು.
ಇತ್ತೀಚೆಗೆ ಪ್ರವಾದಿ ಮಹ್ಮದ ಫೈಗಂಬರ ರವರ ಬಗ್ಗೆ ಹಗುರವಾಗಿ ಮಾತನಾಡಿದ್ದರ ಹಿನ್ನೆಲೆಯಲ್ಲಿ ರಾಷ್ಟವ್ಯಾಪಿ ಉಂಟಾಗಿರುವ ಪ್ರತಿಭಟನೆ ಕುರಿತು ಮುಂಜಾಗೃತವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಷಿಯಲ್ ಮಿಡಿಯಾ ಮೂಲಕ ಕೆಲವರು ಭಾವನಾತ್ಮಕ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಪ್ರಚೋದನಾತ್ಮಕ ಮೇಸೆಜ್ ಮಾಡುತ್ತಿರುವದು ಕಂಡು ಬರುತ್ತದೆ. ಆದರೆ ಇಂತಹ ಮೇಸೆಜ್ ಗಳನ್ನು ಮಾಹಿತಿ ತಿಳಿಯದೆ ಮತ್ತೊಬ್ಬರಿಗೆ ಹಂಚುವದು, ಪ್ರಚೋಧನೆಗೆ ಒಳಗಾಗುವದು ಮಾಡಬಾರದು. ಸಾಮಾಜಿಕ ಜಾಲತಾಣದಲ್ಲಿ ಬಂದಂತ ಮಾಹಿತಿ ಎಲ್ಲವೂ ನಿಜ ಇಲ್ಲದಿರಬಹುದು. ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಮಾಹಿತಿ ಪಡೆಯುವ ಮೂಲಕ ಅಂತಹ ದುಶ್ಕೃತ್ಯದಲ್ಲಿ ತೊಡಗಿದವರ ವಿರುದ್ದ ಪೊಲೀಸ್‌ರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯ ಎಸ್ಸಾರ್. ರಸೂಲ್, ಸಂಗಪ್ಪ ಹಿರೆಮನಿ, ಬಸವರಾಜ ಬಂಕದ ಮನಿ, ರಘುವೀರ, ಶರಣಪ್ಪ ಕಟ್ಟಿಮನಿ, ಹನುಮಂತ, ವೆಂಕಟೇಶ ಹಿರಮನಿ, ಪರಶುರಾಮ ಸೆರಿ ಅನೇಕರು ಉಪಸ್ಥಿತರಿದ್ದರು.