ರಾಯಚೂರು: ಬೇಸಿಗೆಯ ಬೆಳೆಗಳಿಗೆ ದಿನದ ಹಗಲಿನ ಸಮಯದಲ್ಲಿ 12 ಗಂಟೆಗಳ ಕಾಲ ತ್ರಿಫೀಸ್ ವಿದ್ಯುತ್ ಹಾಗೂ ಟಿಸಿ ಬದಲಾವಣೆಯಲ್ಲಿನ ಭ್ರಷ್ಟಾಚಾರವನ್ನು ತಡೆಯಬೇಕೆಂದು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ರಾಯಚೂರಿನ ಜೆಸ್ಕಾಂ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದ ವಿದ್ಯುತ್ , ಉತ್ಪಾದನೆಯಲ್ಲಿ ಶೇ.40% ರಷ್ಟು ರಾಯಚೂರು ಶಾಖೋತ್ಪನ್ನ
ಕೇಂದ್ರದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆಯಾಗಿದ್ದರೂ ಕೂಡಾ ಇಲ್ಲಿನ ಸ್ಥಳೀಯ ರೈತರ ಪಂಪಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲಾ. ರೈತರ ಪಂಪಸೆಟ್ ಹಗಲು ಹೊತ್ತಿನಲ್ಲಿ ತಡೆರಹಿತ 7 ತಾಸುಗಳ ವಿದ್ಯುತ್ ಪೂರೈಕೆ ಮಾಡಬೇಕೆಂದು ಸರಕಾರ ನಿರ್ದೇಶನ ಮಾಡಿದ್ದರೂ ಕೂಡಾ ಜಿಲ್ಲೆಯ ಹಲವೆಡೆ ಹಗಲು ಸಮಯದಲ್ಲಿ ಕೇವಲ 2-3 ತಾಸುಗಳ ವರೆಗೆ ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದ್ದ, ಇದರಿಂದ ರೈತರ ಬೆಳೆಗಳಿಗೆ ಪೂರೈಕೆಯಾಗುತ್ತಿಲ್ಲ.
ಜಿಲ್ಲೆಯಲ್ಲಿ ಈಗಾಗಲೇ ಬಿಸಿಲಿನ ತಾಪಮಾನ 42 ಡಿಗ್ರಿ ಇದೆ. ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದ್ದು, ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಆದರೆ ಸಕಾಲದಲ್ಲಿ ವಿದ್ಯುತ್ ಲಭ್ಯವಾಗದೇ ರೈತರ ಬೆಳೆಗಳು ಒಣಗುತ್ತಿವೆ. ಜಿಲ್ಲೆಯಲ್ಲಿ ಶೇ. 56% ರಷ್ಟು ಒಣ ಬೇಸಾಯ ಮಳೆಯಾಶ್ರಿತ ಭೂ ಪ್ರದೇಶವಿದ್ದು, ರೈತರು
ಬಾವಿ, ಬೋರವೆಲ್ ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡು ರೈತರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಹಗಲಿನಲ್ಲಿ 2-3 ತಾಸುಗಳ ವಿದ್ಯುತ್ ಸರಬರಾಜು ಬೆಳೆಗಳಳಿಗೆ ನೀರು ಹಾಯಿಸಲು ಕಷ್ಟವಾಗುತ್ತಿದೆ.
ರಾತ್ರಿ ವೇಳೆಯಲ್ಲಿಯೇ ಹೆಚ್ಚಾಗಿ ಫೇಸ್ ವಿದ್ಯುತ್ ಸರಬರಾಜು ಕೊಡುತ್ತಿದ್ದು, ಇದರಿಂದ ರೈತರು ನಿದ್ದೆಗೆಟ್ಟು ಜಮೀನುಗಳಿಗೆ ನೀರು ಹಾಯಿಸುವ ಪರಿಸ್ಥಿತಿ ಉದ್ಭವವಾಗಿದೆ.
ರಾತ್ರಿ ವಿಷ ಜಂತುಗಳಿಂದ ಅಪಾಯವಾಗುವ ಸಂಭವವಿದ್ದು, ರೈತರ ಹಿತದೃಷ್ಟಿಯಿಂದ
ಹಗಲು ವೇಳೆಯಲ್ಲಿಯೇ 12 ತಾಸುಗಳ 3 ಫೇಸ್ ವಿದ್ಯುತ್ತನ್ನು ಪಂಪಸೆಟ್ ಗಳಿಗೆ ಒದಗಿಸಬೇಕೆಂದು
ಭಾರತೀಯ ಕಿಸಾನ್ ಸಂಘ ರಾಯಚೂರು ಜಿಲ್ಲಾ ಘಟಕ ಆಗ್ರಹಿಸಿದೆ. ಇನ್ನು ಜಿಲ್ಲೆಯ ಹಲವೆಡೆ, ಸುಟ್ಟ ಟ್ರಾನ್ಸಫಾರ್ಮರ್ ಗಳ (ಟಿ.ಸಿ)ಗಳ ಬದಲಾವಣೆಗೆ ಅಧಿಕಾರಿಗಳು ರೈತರಿಂದ ಹಣದ ಬೇಡಿಕೆ ಇಡುತ್ತಿದ್ದು, ಇದರಿಂದ ವಿದ್ಯುತ್ ಪರಿವರ್ತಕಗಳ ಬದಲಾವಣೆಯಲ್ಲಿ
ಬ್ರಷ್ಟಾಚಾರ ಆಗುತ್ತಿದ್ದು ರೈತರಿಗೆ ತೊಂದರೆಯಾಗುತ್ತಿದೆ.
ಸರಕಾರದ ಆದೇಶದಂತೆ 72 ತಾಸುಗಳಲ್ಲಿ ಟಿ.ಸಿ. ಬದಲಾವಣೆ ಮಾಡಿಕೊಡಬೇಕೆಂದು ನಿಯಮವಿದ್ದರೂ ಕೂಡಾ ಜಿಲ್ಲೆಯ ಹಲವೆಡೆ ತಿಂಗಳುಗಟ್ಟಲೇ ಟಿಸಿ ಗಾಗಿ
ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು 72 ಗಂಟೆಗಳಲ್ಲಿ ಟಿಸಿ ಬದಲಾಯಿಸಲು ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.