ಬಸ್ ಸೌಕರ್ಯ ಕಲ್ಪಿಸಿ..! ನಿರ್ಲಕ್ಷ್ಯಸಿದ್ದರೆ ಉಗ್ರವಾದ ಪ್ರತಿಭಟನೆ ಎಚ್ಚರಿಕೆ : ಎಬಿವಿಪಿ
ಇಂಡಿ : ತಾಲ್ಲೂಕಿನಲ್ಲಿ ಗುಬ್ಬೇವಾಡ, ಶಿರಗೂರ, ಉಮರಾಣಿ, ಕೊಳುರಗಿ, ಚಿಕ್ಕಬೇನೂರ, ಸಾತಲಗಾಂವ ಸೇರಿದಂತೆ ಸುಮಾರು ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಬಸು ಓಡಾಡುತ್ತಾಯಿಲ್ಲ. ವಿಧ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಪೆಟ್ಟಾಗುತ್ತಿದೆ. ಕೂಡಲೇ ಬಸ್ಸಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ವ್ಯವಸ್ಥಾಪಕ ಸಂಗಮೇಶ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಸಚಿನ್ ಧಾನಗೊಂಡ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಾಮಾನ್ಯ ಜನರು ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಇಂಡಿ ನಗರಕ್ಕೆ ಬರುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ ಓಡಾಡುದೆ ಇರುವುದರಿಂದ ವಿಧ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುವುದು ಅತ್ಯಂತ ದುಸ್ಥಿತಿಯಾಗಿದೆ. ಕೂಡಲೇ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಸ್ಸಿನ ಸಮಸ್ಯೆ ಪರಿಹರಿಸಬೇಕು. ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅರುಣ ಪೂಜಾರಿ, ಗಣೇಶ ಹಂಜಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.