ಇಂಡಿ ಪ್ರತ್ಯೇಕ ಜಿಲ್ಲೆಗಾಗಿ ಡಿ-26 ರಂದು ಪ್ರತಿಭಟನೆ: ಜಿಲ್ಲಾ ಹೋರಾಟ ಸಮಿತಿ
ಇಂಡಿ : ಇಂಡಿ ಪ್ರತ್ಯೇಕ ಜಿಲ್ಲೆಗಾಗಿ ಡಿ 26 ರಂದು ಬೆಳಿಗ್ಗೆ10 ಘಂಟೆಗೆ ಪ್ರವಾಸಿ ಮಂದಿರದಿಂದ ಕಾಲ ನಡಿಗೆ ಮೂಲಕ ಪ್ರಮುಖ ರಸ್ತೆಯಲ್ಲಿ ಹಾದು ಕಂದಾಯ ಉಪ ವಿಭಾಗದ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಹೋರಾಟ ಸಮತಿ ಗೌರವ ಅಧ್ಯಕ್ಷ ಭೀಮಣ್ಣ ಕೌಲಗಿ ಅವರು ತಿಳಿಸಿದ್ದಾರೆ
ನಮ್ಮ ಇಂಡಿ ಭಾಗದಲ್ಲಿ ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಅರ್ಹತೆ ಮತ್ತು ಮೂಲ ಸೌಕರ್ಯಗಳನ್ನು ಹೊಂದಿದ್ದೆವೆ. ಅದಲ್ಲದೇ ಈ ಬಾಗ ಇನ್ನೂ ಶೈಕ್ಷಣಿಕವಾಗಿ ಮತ್ತು ಕೈಗಾರಿಕಾ ಕೇಂದ್ರಗಳ ಬರುವ ಮೂಲಕ ಇಲ್ಲಿರುವ ಜನರಿಗೆ ನ್ಯಾಯ ದೊರಕಬೇಕಾಗಿದೆ ಎಂದು ಹೇಳಿದರು.
ಆ ಕಾರಣಕ್ಕಾಗಿ ಡಿ-೨೬-೨೦೨೩ ಮಂಗಳವಾರ ಬೆಳಿಗ್ಗೆ ೧೦ ಘಂಟೆಗೆ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಮೂಲಕ ಕಂದಾಯ ಉಪವಿಭಾಗ ಅಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಚಿಂತಕರು, ಯುವಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕು ಎಂದು ಹೇಳಿದರು.