ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರ ಗೊಲ್ಮಾಲ್; ಅಧಿಕಾರಿಗಳ ವಿರುದ್ಧ ಪ್ರತಿಭಟನೆ:
ಮಕ್ಕಳಿಗೆ, ಮಹಿಳೆಯರಿಗೆ ನೀಡುವ ಆಹಾರ ಪದಾರ್ಥ ಕಳ್ಳರ ಪಾಲಾಗುತ್ತಿದೆಯಾ..?
ಇಂಡಿ : ಅಂಗನವಾಡಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಗೋಲ್ ಮಲ್ ಮಾಡುತ್ತಿದ್ದಾರೆ.ನಿಗದಿಯಂತೆ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಕೂಡಲೇ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಡಿ.ಎಸ್ .ಎಸ್ ಸಂಘಟನೆಯ ವತಿಯಿಂದ ಗುರುವಾರ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆ ನಿರತ್ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ತಾಲ್ಲೂಕು ಸಂಚಾಲಕ ರಮೇಶ ನಿಂಬಾಳಕರ ಮಾತಾನಾಡಿದ ಅವರು, ತಾಲೂಕಿ ಸಾಲೋಟಗಿ ಗ್ರಾಮದಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಇಂಡೆಂಟ್ ಪ್ರಕಾರ ಆಹಾರವನ್ನು ನೀಡದೇ ಇಂಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ತೋರಿಸಿ ಆಹಾರ ಮಾತ್ರ ಕಡಿಮೆ ವಿತರಣೆ ಮಾಡುತ್ತಿದ್ದಾರೆ. ಇದನ್ನು ಗಮನಕ್ಕ ಬಂದ ತಕ್ಷಣ ಡಿಎಸ್ ಎಸ್ ಪದಾಧಿಕಾರಿಗಳು ನಿನ್ನೆಯ ದಿನ ಅಕ್ರಮವಾಗಿ ಸಾಗಿಸುತ್ತಿರುವ ಆಹಾರ ವಾಹನವನ್ನು ತಡೆದು ಪಂಚಾಯತ್ ಗೆ ಒಪ್ಪಿಸಿರುತ್ತಾರೆ. ಆದರೆ ಬೆಳಿಗ್ಗೆ ರಾಜಕೀಯ ಕೈವಾಡದ ಮೂಲಕ ವಾಹನವನ್ನು ಪರಿರಾಮಾಡಿರುತ್ತಾರೆ ಎಂದು ದೂರಿದರು. ಆಹಾರ ಕೊಡವಲ್ಲಿ ದುರುಪಯೋಗ ಮಾಡಿದ ಇಲಾಖೆ ಎಲ್ಲಾ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಗೊಳಿಸಬೇಕು. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಕ್ಷಣ ಮಾತ್ರವೂ ಸ್ಥಳ ಬಿಟ್ಟು ಕದಲೊದಿಲ್ಲ ಎಂದರು. 1 ದಿನವಾಗಲಿ ತಿಂಗಳವಾಗಲಿ ನಿರಂತರ ಹೋರಾಟ ಮಾಡುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಾಬು ಗುಡಮಿ, ರೇವಣಸಿದ್ದ ಮಸಳಿಕೇರಿ, ರಾಮು ದೊಡ್ಡಮನಿ, ಡಿ ಎಸ್ ಎಸ್ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.