ಇಂಡಿ: ಗುಲ್ಬರ್ಗನಗರದ ಶರಣಬಸವೇಶ್ವರ ಜಾತ್ರಾ
ಮೈದಾನದಲ್ಲಿ ಮಾರ್ಚ್ 12ರ ಮಂಗಳವಾರರಂದು
ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2ಎ
ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಪ್ರತಿಭಟನೆ
ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ
ತಾಲೂಕಾ ಅಧ್ಯಕ್ಷ ವಿ.ಹೆಚ್. ಬಿರಾದಾರ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು – ದ್ದೇಶಿಸಿ ಮಾತನಾಡಿದರು. ಅಂದು ಇಂಡಿ ತಾಲೂಕಿನ ಪಂಚಮಸಾಲಿ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಮಕ್ಕಳ ಮುಂದಿನ ಭವಿಷ್ಯತ್ತಿಗಾಗಿ ಮೀಸಲಾತಿಯ ಅವಶ್ಯಕತೆ ಇದ್ದು, ಹೋರಾಟ ತೀವ್ರಗೊಂಡಾಗ ಮಾತ್ರ ಸರಕಾರಗಳು ನಮ್ಮ ನೆರವಿಗೆ ಬರಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಗುಲ್ಬರ್ಗದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಾವು ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟದ ಕಿತ್ತು ಹೆಚ್ಚಿಸೋಣ ಎಂದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕಾ ಕಾರ್ಯದರ್ಶಿ ಶಿವಾನಂದ ಚಾಳಿಕಾರ, ಅನೀಲಗೌಡ ಬಿರಾದಾರ, ಬಾಳು ಮುಳಜಿ, ಅರವಿಂದ ಪಾಟೀಲ, ವಿಠ್ಠಲ ಬಾಬಳಗಾಂವ, ಎಂ.ಆರ್. ಪಾಟೀಲ, ಪ್ರಶಾಂತ ಲಾಳಸಂಗಿ, ಭೀಮಾಶಂಕರ ಪ್ರಚಂಡಿ, ಚನ್ನಬಸವ ಮುಜಗೊಂಡ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ವಿ.ಹೆಚ್. ಬಿರಾದಾರ ಭಾವಚಿತ್ರ.